ಮಹಾರಾಷ್ಟ್ರ: ಬಾಲಿವುಡ್ ನಟ ಸಲ್ಮಾನ್ ಖಾನ್ ತಮ್ಮ ಅಭಿಮಾನಿಗಳನ್ನು ರಂಜಿಸುವುದರಲ್ಲಿ ಹಿಂದೆ ಬೀಳುವುದಿಲ್ಲ. ಮಹಾರಾಷ್ಟ್ರದ ರಾಯಘಡ್ ಜಿಲ್ಲೆಯ ಪನ್ವೇಲ್ನಲ್ಲಿರುವ ಫಾರ್ಮ್ಹೌಸ್ನಲ್ಲಿ ಸಲ್ಮಾನ್ ಕಾಲ ಕಳೆಯುತ್ತಿದ್ದಾರೆ. ಅಲ್ಲಿಯ ಆಟೋ ಡ್ರೈವರ್ ಒಬ್ಬರಿಂದ ಆಟೋ ಪಡೆದು ಅದನ್ನು ಓಡಿಸಿದ್ದಾರೆ. ಅದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದೆ.
ವಿಡಿಯೋದಲ್ಲಿ ಕಾಣುವಂತೆ ನಟ ಸಲ್ಮಾನ್ ಖಾನ್ ಸಂಜೆ ವೇಳೆಯಲ್ಲಿ ತಮ್ಮ ಕಾರಿನಿಂದ ಇಳಿದು ಆಟೋ ಡ್ರೈವರ್ ಹತ್ತಿರ ತೆರಳಿ ಆಟೋ ಪಡೆದಿದ್ದಾರೆ. ಬಳಿಕ ಅವರೇ ಆಟೋವನ್ನು ಓಡಿಸಿ ಖುಷಿ ಪಟ್ಟಿದ್ದಾರೆ. ಈ ವೇಳೆ ಅಭಿಮಾನಿಗಳು ಈ ದೃಶ್ಯವನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಸಲ್ಮಾನ್ ಅವರ ಈ ಅನಿರೀಕ್ಷಿತ ನಡೆ ನೆಟ್ಟಿಗರ ಗಮನ ಸೆಳೆದಿದೆ. ವಿಡಿಯೋಗೆ ಪ್ರತಿಕ್ರಿಯಿಸಿರುವ ಅಭಿಮಾನಿಗಳು, ‘ಸಲ್ಲು ಭಾಯ್ ರಾಕ್ಸ್’ ಎಂದು ಕಾಮೆಂಟ್ ಮಾಡಿದ್ದಾರೆ.

SALMAN KHAN Driving Auto Rikshaw Tonight! 🔥 pic.twitter.com/1gUBI17UrA
— SH!VAM 🔱 (@ibeingshivay) December 28, 2021
ಮತ್ತೊಬ್ಬರು ಸಲ್ಮಾನ್ ಖಾನ್ ‘ಅತಿ ಸರಳ ವ್ಯಕ್ತಿ’ ಎಂದು ಕೊಂಡಾಡಿದ್ದಾರೆ. ಈಚೆಗಷ್ಟೇ ಸಲ್ಮಾನ್ ಖಾನ್ ತಮ್ಮ 56ನೇ ಜನ್ಮದಿನವನ್ನು ಪನ್ವೇಲ್ನಲ್ಲಿರುವ ಫಾರ್ಮ್ಹೌಸ್ನಲ್ಲಿ ಆಚರಿಸಿಕೊಂಡಿದ್ದರು. ಇದಕ್ಕೂ ಮುನ್ನ ಅವರಿಗೆ ಫಾರ್ಮ್ಹೌಸ್ನಲ್ಲಿಯೇ ಹಾವು ಕಚ್ಚಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಹಾವು ವಿಷಪೂರಿತವಲ್ಲದ ಕಾರಣ ಕೆಲ ಗಂಟೆಗಳ ಬಳಿಕ ಡಿಸ್ಚಾರ್ಜ್ ಮಾಡಲಾಗಿತ್ತು.