ಬೆಂಗಳೂರು:- ಟೆಂಟ್ ನಲ್ಲಿ ಬ್ಲೂ ಫಿಲ್ಮಿ ತೋರಿಸಿ ಜೀವನ ಮಾಡಿದವರು ಎಂಬ ಹೆಚ್ ಡಿಕೆ ಹೇಳಿಕೆಗೆ ಡಿಕೆ ಶಿವಕುಮಾರ್ ಅವರು ಖಡಕ್ಕಾಗಿ ಉತ್ತರ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾನು ಟೆಂಟ್ಗಳನ್ನು ನಡೆಸಿದ್ದು ನಿಜ. ಆದರೆ ಒಂದೇ ಒಂದು ಟೆಂಟ್ ಅಲ್ಲ, ಒಟ್ಟು 3-4 ಟೆಂಟ್ಗಳನ್ನ ನಾನು ನಡೆಸುತ್ತಿದೆ. ಈ ಪೈಕಿ ದೊಡ್ಡಾಲಹಳ್ಳಿ, ಹಾರೋಬೆಲೆ, ಕೋಡಿ ಹಳ್ಳಿ & ಹುಣಸೆ ಹಳ್ಳಿ ಬಳಿ ಟೆಂಟ್ಗಳನ್ನು ನಡೆಸುತ್ತಿದ್ದೆ. ಇವುಗಳ ಪೈಕಿ ಹುಣಸೆ ಹಳ್ಳಿಯಲ್ಲಿ ಟೆಂಟ್ ಇಂದಿಗೂ ನಡೆಯುತ್ತಿದೆ. ಆದ್ರೆ ನಾವು, ಆ ಟೆಂಟ್ಗಳಲ್ಲಿ ಎಂದಿಗೂ ಕುಮಾರಸ್ವಾಮಿ ಅವರು ಆರೋಪ ಮಾಡಿರುವ ರೀತಿ ಸಿನಿಮಾ ಹಾಕಿಲ್ಲ. ಬೇಕಿದ್ರೆ ಈಗಲೂ ಹೋಗಿ ಮಾಧ್ಯಮಗಳು ಪರಿಶೀಲಿಸಲಿ ಎಂದಿದ್ದಾರೆ.
ಇನ್ನೂ ಕೆಲವು ದಿನಗಳ ಹಿಂದೆ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಮಾತನಾಡುತ್ತಾ ಏಕವಚನ ಇರುವ ಶಬ್ಧಗಳನ್ನು ಬಳಸಿದ್ದರು ಎಚ್.ಡಿ. ಕುಮಾರಸ್ವಾಮಿ ಅವರು. ಡಿಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಾ, ‘ಟೆಂಟಲ್ಲಿ ಬ್ಲೂ ಫಿಲಂ ತೋರಿಸಿಕೊಂಡು ಜೀವನ ಮಾಡಿಕೊಂಡು ಬಂದವರು ಅವರು, ಆ ಮನಸ್ಥಿತಿಯಲ್ಲಿ ಅವನಿಗೆ ಇನ್ನೇನು ಬರುತ್ತೆ?’ ಎಂಬ ಮಾತನಾಡಿದ್ದರು ಎಚ್ಡಿಕೆ. ಈ ಮೂಲಕ ಇಬ್ಬರ ಮಧ್ಯೆ ದೊಡ್ಡ ಜ್ವಾಲೆಯೇ ಹೊತ್ತಿದೆ. ಅದಕ್ಕೆ ಈಗ ಉತ್ತರ ನೀಡಿದ್ದಾರೆ ಡಿಸಿಎಂ ಡಿ.ಕೆ. ಶಿವಕುಮಾರ್.