ಮಂಡ್ಯ:– ತೆಲಂಗಾಣ ಗೆದ್ದರೆ ನಾಲ್ಕು ರಾಜ್ಯ ಗೆದ್ದಂತೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಮಾತನಾಡಿದ ಅವರು, ಇಂಡಿಯಾ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಇಂಡಿಯಾ. ತೆಲಂಗಾಣ ಗೆದ್ದಿದ್ದೇವೆ, ನಾಲ್ಕು ರಾಜ್ಯ ಗೆದ್ದಾಗೆ. ಸೌತ್ ಇಂಡಿಯಾದಲ್ಲಿ ಮತದಾರರು ಬಿಜೆಪಿ ಮುಕ್ತ ಮಾಡಿದ್ದಾರೆ ಎಂದರು.
ಕೇಂದ್ರದ ಬಿಜೆಪಿಯವರು 10 ವರ್ಷಗಳಿಂದ ಆಡಳಿತ ಮಾಡ್ತಿದ್ದಾರೆ. ಇದು ಇಂಡಿಯಾ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಅಂದ್ರೆ ಇಂಡಿಯಾ. ಸ್ವಾತಂತ್ರ್ಯ ತರಲು ಹೋರಾಟ ಮಾಡಿದ್ದು ಮೂಲತಃ ಕಾಂಗ್ರೆಸ್ ನಾಯಕರು. ಮಹಾತ್ಮಗಾಂಧಿ ಅವರಿಂದ ಹಿಡಿದು ಅನೇಕ ನಾಯಕರು. ಕಾಂಗ್ರೆಸ್ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ. ಕಾಂಗ್ರೆಸ್ ಮುಕ್ತ ಇಂಡಿಯಾ ಮಾಡ್ತಿನಿ ಅಂದಿದ್ರು, ಸೌತ್ ಇಂಡಿಯಾದಲ್ಲಿ ಬಿಜೆಪಿ ಮುಕ್ತ ಮಾಡಿದ್ದಾರೆ. ಕೇರಳ, ತಮಿಳುನಾಡು, ಕರ್ನಾಟಕ, ತೆಲಂಗಾಣದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಯಾಗಿದೆ ಎಂದು ಟಾಂಗ್ ಕೊಟ್ಟರು.
10 ವರ್ಷ ತೆಲಂಗಾಣದಲ್ಲಿ ಗ್ಯಾಪ್ ಇತ್ತು. ಇವತ್ತು ಜನರು ಒಂದು ತೀರ್ಮಾನ ತೆಗೆದುಕೊಂಡಿದ್ದಾರೆ. ಮುಂದಿನ ಚುನಾವಣೆಗೆ ಕಾಂಗ್ರೆಸ್ಗೆ ಭವಿಷ್ಯ ಇದೆ. ತೆಲಂಗಾಣ ಮತದಾರರು ಇವತ್ತು ತೋರಿಸಿದ್ದಾರೆ. ತೆಲಂಗಾಣ ಮತದಾರರಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು.