ನೆಲಮಂಗಲ : ಮೆಟ್ರೋ ಟಿಕೆಟ್ ದರ ಏರಿಕೆ ಖಂಡಿಸಿ ದರ ವಾಪಸ್ಗೆ ಆಗ್ರಹಿಸಿ ನೂರಾರು ಬಿಜೆಪಿ ಕಾರ್ಯಕರ್ತರು ಬೆಂಗಳೂರು ಹೊರವಲಯ ನೆಲಮಂಗಲ ರಸ್ತೆಯ ಮಾದವಾರದ ಮೆಟ್ರೋ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇನ್ನೂ ಈ ವೇಳೆ ಮೆಟ್ರೋ ನಿಲ್ದಾಣಕ್ಕೆ ಬಿಜೆಪಿ ಕಾರ್ಯಕರ್ತರು ನುಗ್ಗುವ ಯತ್ನವನ್ನು ನಡೆಸಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕೂಡಲೇ ದರವನ್ನ ಇಳಿಸುವಂತೆ ಆಗ್ರಹಿಸಿದರು.
ಇನ್ನೂ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆ ವೇಳೆ ಮೆಟ್ರೋ ನಿಲ್ದಾಣದಿಂದ ಹೊರ ಬಂದ ಪ್ರಯಾಣಿಕರನ್ನ ಅವಮಾನೀಯ ರೀತಿಯಲ್ಲಿ ಮೆಟ್ರೋ ಸಿಬ್ಬಂದಿಗಳು ನಡೆಸಿಕೊಂಡಿದ್ದಲ್ಲದೆ, ಕೆಲ ಕಾಲ ಕೂಡಿ ಹಾಕಿದನ್ನು ಪ್ರಯಾಣಿಕರು ಖಂಡಿಸಿದ್ದಾರೆ. ಈ ವೇಳೆ ಪೊಲೀಸರ ಜೊತೆಗೆ ಮೆಟ್ರೋ ಸಿಬ್ಬಂದಿ ವಾಗ್ವಾದಕ್ಕೆ ಇಳಿದ ಘಟನೆ ಕೂಡ ನಡೆದಿದೆ. ಕೂಡಿ ಹಾಕಿದಲ್ಲದೆ ಅರ್ಧ ಇಳಿಸಿದ ಶಟರ್ ನಿಂದ ನುಗ್ಗು ಬರುವ ಹಾಗೆ ಪ್ರಯಾಣಿಕರನ್ನ ಅವಮಾನೀಯ ರೀತಿಯಲ್ಲಿ ನಡೆಸಿಕೊಂಡ ಘಟನೆಯಿಂದ ಪ್ರಯಾಣಿಕರ ಆಕ್ರೋಶಕ್ಕೆ ಕಾರಣವಾಗಿದೆ.