ಬೆಂಗಳೂರು: ಈಗ ಚುನಾವಣೆ ಮಾಡಿದ್ರೆ ಬಿಜೆಪಿಗೆ (BJP) 40 ಸೀಟು ಸಹ ಬರಲ್ಲ. ಏಕೆಂದರೆ ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ. ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದ್ರೂ ಅಸರಿ ಮಾಡೋಕಾಲ್ಲ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
CM Siddaramaiah: ಹೆಚ್ಚುವರಿ ಅಂಬುಲೆನ್ಸ್ ಖರೀದಿಗೆ ಹಣಕಾಸು ಒದಗಿಸುತ್ತೇವೆ: ಸಿಎಂ ಭರವಸೆ!
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2018ರ ಚುನಾವಣೆಯಲ್ಲೇ ಮೋದಿ (Modi) ಮತ್ತು ಯಡಿಯೂರಪ್ಪ (Yediyurappa) ನೇತೃತ್ವದಲ್ಲಿ ಬಿಜೆಪಿ ವಿಧಾನಸಭಾ ಚುನಾವಣಾ ಎದುರಿಸಿತ್ತಕ. ಅಷ್ಟೆಲ್ಲಾ ಗುದ್ದಾಡಿದ್ರೂ ಕೊನೆಗೆ ಬಂದು ನಿಂತಿದ್ದು 104ಕ್ಕೆ. ಇವತ್ತು ಬಿಜೆಪಿ ಹದಗೆಟ್ಟು ಹೋಗಿದೆ, ಈಗ ಚುನಾವಣಾ ನಡೆದ್ರೆ 66 ಅಲ್ಲಾ 40 ಸೀಟ್ ಸಹ ಬಿಜೆಗೆ ಬರಲ್ಲ. ಬಿಜೆಪಿ ರಿಪೇರಿ ಮಾಡಲಾಗದಷ್ಟು ಹದಗೆಟ್ಟಿದೆ, ವಿಜಯೇಂದ್ರ ಅಲ್ಲಾ ಯಾರೂ ಅಧ್ಯಕ್ಷರಾದರೂ ಅದನ್ನು ಸರಿ ಮಾಡಲು ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಪಂಚ ರಾಜ್ಯಗಳ ಚುನಾವಣೆಯಲ್ಲಿ (Five States Election) ಒಳ್ಳೆಯ ಫಲಿತಾಂಶ ಬರುತ್ತೆ. ಮಧ್ಯಪ್ರದೇಶ, ಛತ್ತೀಸ್ ಘಡ ಎರಡರಲ್ಲೂ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ತೆಲಂಗಾಣದಲ್ಲಿಯೂ ಅಧಿಕಾರಕ್ಕೆ ಬರುವ ಎಲ್ಲ ಅವಕಾಶಗಳಿವೆ ರಾಜಸ್ಥಾನದಲ್ಲಿ ನೆಕ್ ಟು ನೆಕ್ ಫೈಟ್ ಇದೆ. ಆದ್ರೆ ಅತೀವ ವಿಜಯ ಕಾಂಗ್ರೆಸ್ಗೆ ಬರುತ್ತದೆ. ಜನರ ಭಾವನೆ ಯಾವರೀತಿ ಇದೆ ಅನ್ನೋದನ್ನ ಈ ಚುನಾವಣಾ ಫಲಿತಾಂಶ ತಿಳಿಸುತ್ತದೆ. ಯಾವುದೇ ರಾಜಕೀಯ ಪಕ್ಷಗಳು ಕೊನೆಯ ಹಂತದವರಿಗೆ ಅಭ್ಯರ್ಥಿಗಳ ಆಯ್ಕೆ ಪಟ್ಟಿ ತೆಗೆದುಕೊಂಡು ಹೋಗಬಾರದು. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಬೇಕು. ಇದರಿಂದಾಗಿ ಅಭ್ಯರ್ಥಿಗಳು ಅತಿಹೆಚ್ಚು ಜನರನ್ನು ತಲುಪಬಹುದು. ಇದು ಎಲ್ಲಾ ರಾಜಕೀಯ ಪಕ್ಷಗಳಿಗೂ ಒಳ್ಳೆಯದು ಎಂದು ಹೇಳಿದ್ದಾರೆ.