ವಿಜಯಪುರ:- ಬಿಜೆಪಿ ಗ್ಯಾರಂಟಿಗಳೇ 3 ರಾಜ್ಯಗಳ ಗೆಲುವಿಗೆ ಕಾರಣ ಎಂದು ಸಚಿವ MB ಪಾಟೀಲ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಬಿಜೆಪಿ ಕೂಡ ಗ್ಯಾರಂಟಿಗಳನ್ನು ಘೋಷಿಸಿತ್ತು. 3 ರಾಜ್ಯಗಳ ಗೆಲುವಿಗೆ ಅದೂ ಕಾರಣವಾಗಿದೆ. ಗ್ಯಾರಂಟಿಗಳನ್ನು ವಿರೋಧ ಮಾಡಿದವರೇ ಗ್ಯಾರಂಟಿ ಘೋಷಿಸಿದರು, ಅದರಿಂದಲೇ ಗೆಲುವಾಗಿರಬಹುದು ಎಂದು ಹೇಳಿದರು.
ಪ್ರಜಾಪ್ರಭುತ್ವ ವ್ಯಸವಸ್ಥೆಯಲ್ಲಿ ಮತದಾರರ ತೀರ್ಪು ಒಪ್ಪಲೇಬೇಕು. ಮೂರು ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಮತದಾರರ ತೀರ್ಪು ಒಪ್ಪಬೇಕು. ಮಧ್ಯಪ್ರದೇಶ, ಛತ್ತೀಸ್ಗಢ ಚುನಾವಣೆಯಲ್ಲಿ ಬಹಳಷ್ಟು ನಿರೀಕ್ಷೆ ಇತ್ತು. ಎಲ್ಲಿ ಎಡವಿದ್ದೀವಿ, ಯಾಕೆ ಈ ರೀತಿಯ ಫಲಿತಾಂಶ ಬಂತು ಎನ್ನುವುದು ಪಕ್ಷದಲ್ಲಿ ಚರ್ಚೆಯಾಗುತ್ತದೆ” ಎಂದರು.
ಯಾರು ಗ್ಯಾರಂಟಿಗಳನ್ನು ವಿರೋಧ ಮಾಡಿದರು, ಅವರೇ ಗ್ಯಾರಂಟಿಗಳನ್ನು ಘೋಷಣೆ ಮಾಡಿದರು. ಬಿಜೆಪಿಯವರೂ ಗ್ಯಾರಂಟಿ ಭರವಸೆ ಕೊಟ್ಟಿದ್ದಾರೆ. ಇದೇ ಕಾರಣಗಳಿಂದಾಗಿ ಈ ಫಲಿತಾಂಶ ಬಂದಿರಬಹುದು. ಅಂದರೆ, ಕರ್ನಾಟಕದ ಗ್ಯಾರಂಟಿ ವರ್ಕ್ಔಟ್ ಆಗಿದೆ ಅಂತ ಆಯಿತಲ್ಲಾ” ಎಂದು ಎಂಬಿ ಪಾಟೀಲ್ ಹೇಳಿದರು
ಫಲಿತಾಂಶ ಕುರಿತು ಪಕ್ಷದ ವರಿಷ್ಠರು, ಸಿಡಬ್ಲ್ಯೂಸಿಯಲ್ಲಿ ಚರ್ಚೆಯಾಗಲಿದೆ. ಲೋಕಸಭಾ ಚುನಾವಣೆಯಲ್ಲಿ ನಾವು ಗೆಲ್ಲುವ ವಿಶ್ವಾಸವಿದೆ. ಬೆಲೆ ಏರಿಕೆ, ದೇಶದ ಪರಿಸ್ಥಿತಿ ಹಾಗೂ ಪ್ರಧಾನಿ ಮೋದಿ ಮಾತು ಕೊಟ್ಟಂತೆ ಆಗಿಲ್ಲ. ಅಚ್ಛೇ ದಿನ ಯಾರಿಗೂ ಬಂದಿಲ್ಲ. ಜನರು ಬದಲಾವಣೆ ಮಾಡುತ್ತಾರೆ ಎನ್ನುವ ವಿಶ್ವಾಸ ಇದೆ, ನೋಡೋಣ” ಎಂದರು.