ಧಾರವಾಡ:– ದೇಶದ ಐದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಗಳಲ್ಲಿ ಬಹುತೇಕ ರಾಜ್ಯಗಳಲ್ಲಿ ನಮ್ಮ ಪಕ್ಷಕ್ಕೆ ಬೆಂಬಲ ಸಿಗುತ್ತದೆ. ಹಾಗಾಗಿ ರಾಜಸ್ತಾನ ಸೇರಿ ಬಹುತೇಕ ರಾಜ್ಯಗಳಲ್ಲಿ ಮತದಾರ ನಮ್ಮಗೆ ಅಧಿಕಾರ ನೀಡುವ ವಿಶ್ವಾಸವಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದರು.
ಧಾರವಾಡ ಜಿಲ್ಲೆಯ ಕಲಘಟಗಿ ತಾಲ್ಲೂಕಿನ ದುಮ್ಮವಾಡ ಗ್ರಾಮದಲ್ಲಿ ಮಾಧ್ಯಮಕ್ಲೆ ಪ್ರತಿಕ್ರಿಯೆ ನೀಡಿದ ಅವರು, ನಾನು ರಾಜಸ್ತಾನದ ಚುನಾವಣೆ ಉಸ್ತುವಾರಿ ಆಗಿದೆ. ಅಲ್ಲಿಯ ವಾತವರಣವು ಬಿಜೆಪಿ ಪರ ಇದ್ದು, ನಮ್ಮಗೆ ರಾಜಸ್ತಾನದಲ್ಲಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಐದು ರಾಜ್ಯಗಳಲ್ಲಿಅಧಿಕಾರಕ್ಕೆ ಬರಬೇಕು ಎನ್ನುವ ನಿಟ್ಟಿನಲ್ಲಿ ನಾವು ನಮ್ಮ ಪಕ್ಷದ ನಾಯಕರೆಲ್ಲರು ಕೂಡಿ ಕೆಲಸ ಮಾಡುತ್ತಿದ್ದೇವೆ ಎಂದರು. ಇನ್ನೂ ದೇಶವ್ಯಾಪಿ ವಿಕಶಿತ ಭಾರತ ಸಂಕಲ್ಪ ಯಾತ್ರೆ ನಡೆಯುತ್ತಿದ್ದು, ಜನರು ಇದನ್ನು ಮೋದಿ ಗ್ಯಾರಂಟಿ ಗಾಡಿ ಎಂದು ಗುರುತ್ತಿಸುತ್ತಿದ್ದಾರೆ. ಈ ಯಾತ್ರೆಯ ಉದ್ದೇಶ, ಭಾರತ ಸರ್ಕಾರದ ಯೋಜನೆಗಳು ಎಷ್ಟರಮಟ್ಟಿಗೆ ಜನಗಳಿಗೆ ತಲುಪಿವೆ ಹಾಗೂ ಕೇಂದ್ರ ಸರ್ಕಾರ ಇದೂವರೆಗೂ ಎನ್ನೆಲ್ಲಾ ಯೋಜನೆ ಜಾರಿಗೆ ತಂದಿದೆ ಎಂದು ತಿಳಿಸುವುದಾಗಿದೆ.
ಜೊತೆಗೆ ಯೋಜನೆಗಳ ಫಲಾನುಭವಿಗಳನ್ನು ಇಲ್ಲಿ ಕರೆಯಿಸಿ ಅಭಿಪ್ರಾಯ ಹಂಚ್ಚಿಕೊಳ್ಳುಲಾಗುತ್ತದೆ. ಜಿಲ್ಲೆಯ 145 ಗ್ರಾಮ ಪಂಚಾಯತಿಗಳಲ್ಲಿ ಈ ಯಾತ್ರೆ ಸಾಗುತ್ತಿದೆ. ರೈತರಿಗಾಗಿ ನ್ಯಾನೋ ಯೂರಿಯಾವನ್ನು ತರಲಾಗಿದೆ. ಇದೂ ರೈತರಿಗೆ ಸಮಯದ ಜೋತೆಗೆ ಖರ್ಚು ಉಳಿಸುತ್ತದೆ. ಈ ಯಾತ್ರೆಯಲ್ಲಿ ಡ್ರೋಣ್ ಕೃಷಿ ಔಷಧಿ ಸಿಂಪಡಣೆ ಮಾದರಿ ತೋರಿಸಲಾಗುತ್ತದೆ ಎಂದು ಹೇಳಿದರು.