ಬಾಗಲಕೋಟೆ: ಮುಡಾ ಹಗರಣ ವಿಚಾರವಾಗಿ ಬಿಜೆಪಿ ಪಾದಯಾತ್ರೆ ವಿಚಾರ ಬಗ್ಗೆ ಬಾಡಗಂಡಿಯಲ್ಲಿ ಗೃಹ ಸಚಿವ ಪರಮೇಶ್ವರ ಪ್ರತಿಕ್ರಿಯೆ ನೀಡಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಅನಾವಶ್ಯಕ ರಾಜಕಾರಣ ಅದು ಬಿಟ್ಟು ಏನಿಲ್ಲ. ನಾವು ಈಗಾಗಲೇ ತನಿಖೆಗೆ ಆದೇಶ ಮಾಡಿದ್ದೇವೆ. ಮೂರು ಏಜೆನ್ಸಿ ವಾಲ್ಮೀಕಿ ಹಗರಣ ತನಿಖೆ ಮಾಡ್ತಿವೆ. ಇಡಿ, ಸಿಬಿಐ, ಸಿಐಡಿ, ಎಸ್ಐಟಿ ತನಿಖೆ ನಡೆಸಿವೆ. ಮೈಸೂರಿನ ಮುಡಾ ಬಗ್ಗೆ ನಿವೃತ್ತ ನ್ಯಾಯಾದೀಶ ದೇಸಾಯಿ ನೇತೃತ್ವದಲ್ಲಿ ಆಯೋಗ ಮಾಡಿದ್ದೇವೆ ಎಂದರು.
ಒಬ್ಬ ಸಿಎಂ ಇದ್ದಾಗ ಇನ್ನೊಬ್ಬರನ್ನ ಸಿಎಂ ಅಂತಾ ಹೇಳೋದು ಅನಾವಶ್ಯಕ: ಸಚಿವ ದಿನೇಶ್ ಗುಂಡೂರಾವ್
ಹಾಗೆ ಕಮೀಷನ್ ನವರ ತನಿಖೆ ನಂತರ ಸತ್ಯಾಂಶ ಹೊರಬರುತ್ತೆ. ಸುಮ್ಮನೆ ಬಿಜೆಪಿ,ಜೆಡಿಎಸ್ನವ್ರು ರಾಜಕೀಯ ಮಾಡ್ತಿದ್ದಾರೆ. ಪಾದಯಾತ್ರೆ ವಿಚಾರದಲ್ಲಿ ಅವರಿಬ್ಬರಲ್ಲಿ ಒಡಕು ಆರಂಭವಾಗಿದೆ. ನಾವು ನಾಡ್ತಿವೆ ಅಂತ ಬಿಜೆಪಿ, ಬೇಡ ಅಂತ ಜೆಡಿಎಸ್ ಅಂತಿದ್ದಾರೆ. ನೋಡೋಣ ಪಾದಯಾತ್ರೆ ಮಾಡ್ತಾರೋ ? ಇಲ್ವೊ ? ಅಂತ ನೋಡೋಣ
ನಾವು ಪಾದಯಾತ್ರೆ ಈಗ ಮಾಡಲ್ಲ. ನಮ್ಮ ಕುಟುಂಬಕ್ಕೆ ವಿಷ ಹಾಕಿದ ಪ್ರೀತಂ ಗೌಡರನ್ನು ಪಕ್ಕದಲ್ಲಿ ಕೂಡಿಸಿಕೊಳ್ತಾರೆ ಎಂದು ಬಿಜೆಪಿ ನಾಯಕರ ವಿರುದ್ದ ಹೆಚ್ಡಿಕೆ ಅಸಮಾಧಾನ ವಿಚಾರ.ಅವರಿಬ್ಬರ ಮಧ್ಯದಲ್ಲಿ ಯಾವ ರೀತಿ ಬೆಳವಣಿಗೆ ಆಗುತ್ತೆ ಅಂತ,ರಾಜ್ಯದ ಜನತೆ ಕಾಯ್ದು ನೋಡಬೇಕಾಗುತ್ತೆ. ಹಿಂದೆಲ್ಲಾ ಆಗಿದೆ, ನಮ್ಮ ಜೊತೆ ಇದ್ರು ಬೇರೆ ಆದ್ರೂ,
ಅವರ ಜೊತೆ ಹೋಗಿದ್ದಾರೆ ಏನ ಮಾಡ್ತಾರೆ ನೋಡೋಣ. ರಾಜ್ಯಪಾಲರ ಮೂಲಕ ಸರ್ಕಾರ ಕೆಡುವಲು ಬಿಜೆಪಿ ಮುಂದಾಗಿದೆ ಎಂದು ಕೃಷ್ಣ ಮಬೈರೇಗೌಡ ಹೇಳಿಕೆ ವಿಚಾರ. ಸಂವಿಧಾನಾತ್ಮಕವಾಗಿ ಕೆಲವು ಅಧಿಕಾರ ಕೊಟ್ಟಿದ್ದಾರೆ. ಆ ಚೌಕಟ್ಟಿನಲ್ಲಿ ಮಾತ್ರ ಕೆಲಸ ಮಾಡ್ಬೇಕು ಅವ್ರು. ಚೌಕಟ್ಟು ಮೀರಿ ಹೋದ್ರೆ ಸ್ವಾಭಾವಿಕವಾಗಿ ಅನುಮಾನ ಬರುತ್ತೆ. ರಾಜಕೀಯ ಆಗ್ತಿದೆ ಎಂಬ ಸಂಶಯ ಬರುತ್ತೆ. ರಾಜ್ಯಪಾಲರು ಸಿಎಂ ಅವ್ರಿಗೆ ಶೋಕಾಸ್ ನೊಟೀಸ್ ಕೊಡಲು ಹೊರಟಿದ್ದು ರಾಜಕೀಯ ಪ್ರೇರಣೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.