ರಾಯಚೂರು:– ಹಿಂದುಳಿದ ಜಾತಿಯವನು 2 ಬಾರಿ ಸಿಎಂ ಆದ್ನಲ್ಲಾ ಅಂತ ಬಿಜೆಪಿಗೆ ಹೊಟ್ಟೆ ಉರಿ ಎಂದು ಹೇಳುವ ಮೂಲಕ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಜಾತಿಗಣತಿ, ಒಳ ಮೀಸಲಾತಿಗೆ ನಮ್ಮ ವಿರೋಧವಿಲ್ಲ: ಬಸವಜಯ ಮೃತ್ಯುಂಜಯ ಸ್ವಾಮೀಜಿ!
ʻಸ್ವಾಭಿಮಾನಿʼ ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ-ಜೆಡಿಎಸ್ ಮೈತ್ರಿಕೂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಭಾಷಣ ಆರಂಭಿಸುತ್ತಿದ್ದಂತೆ ನೆರೆದಿದ್ದ ಜನಸ್ತೋಮದಿಂದ ಶಿಳ್ಳೆ, ಚಪ್ಪಾಳೆ ಸಂಭ್ರಮ ಮುಗಿಲು ಮುಟ್ಟಿತ್ತು. ಸಿಎಂ ʻಈ ಸ್ವಾಭಿಮಾʼ ಎನ್ನುತ್ತಿದ್ದಂತೆ ಕೇಕೆ, ಶಿಳ್ಳೆ ಹಾಕುವ ಮೂಲಕ ಜೈಕಾರ ಕೂಗಿದರು.
ವಿರೋಧ ಪಕ್ಷದವರು ಸುಮ್ ಸುಮ್ಮನೆ ಟೀಕೆ ಮಾಡ್ತಾರೆ. ಗ್ಯಾರಂಟಿ ಕೊಟ್ಟ ಮೇಲೆ ಖಜಾನೆ ಖಾಲಿಯಾಗಿದೆ ಅಂತ ಹೇಳ್ತಾರೆ. ಇದು ಎಂತಾ ಹಸಿ ಸುಳ್ಳು, ಖಜಾನೆ ಖಾಲಿಯಾಗಿದ್ರೆ ಇಲ್ಲಿ ಕೋಟ್ಯಂತರ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲು ಆಗ್ತಿತ್ತಾ ಅಂತ ಪ್ರಶ್ನೆ ಮಾಡಿದ್ದಾರೆ.
ಬಿಜೆಪಿ-ಜೆಡಿಎಸ್ನವರು ನಾನು 2ನೇ ಬಾರಿ ಸಿಎಂ ಆದ ಮೇಲೆ ಸುಳ್ಳು ಆರೋಪ ಮಾಡಲು ಶುರು ಮಾಡಿದ್ದಾರೆ. ಅದಕ್ಕೆ ಈ ಸ್ವಾಭಿಮಾನಿ ಸಭೆ ಮಾಡಿರುವುದು. ಇದರ ಮೂಲಕ, ನಿಮ್ಮ ಮೂಲಕ ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ದೇವರಾಜು ಅರಸು ಬಳಿಕ 5 ವರ್ಷ ಅಧಿಕಾರ ಪೂರ್ಣಗೊಳಿಸಿದ ಸಿಎಂ ಅಂದ್ರೆ ಅದು ಸಿದ್ದರಾಮಯ್ಯ. 5 ವರ್ಷದ ಹಲವು ಯೋಜನೆ ಜಾರಿಗೆ ಮಾಡಿದ್ದೇನೆ. ಯಾರೊಬ್ಬರು ಇನ್ನೊಬ್ಬರ ಮನೆ ಮುಂದೆ ಹೋಗಿ ಕೈ ಒಡ್ಡಬಾರದು, ಭಿಕ್ಷುಕರು ಈ ರಾಜ್ಯದಲ್ಲಿ ಇರಬಾರದು ಅಂತ ಅನ್ನಭಾಗ್ಯ ಯೋಜನೆ ಮಾಡಿದೆವು ಎಂದಿದ್ದಾರೆ.
ಕುಮಾರಸ್ವಾಮಿ ಸಿಎಂ ಆಗಿದ್ರು ಆಗ ಏನೂ ಮಾಡಲಿಲ್ಲ. 1 ವರ್ಷ 2 ತಿಂಗಳಲ್ಲಿ ಏನೂ ಕೆಲಸ ಮಾಡಲಿಲ್ಲ. ʻಕೊಟ್ಟ ಕುದುರೆ ಏರದವನು ವೀರನೂ ಅಲ್ಲಾ ಶೂರನೂ ಅಲ್ಲಾʼ ಎಂದು ವ್ಯಂಗ್ಯವಾಡಿದ ಸಿಎಂ, 17 ಜನ ಶಾಸಕರನ್ನ ಬಿಜೆಪಿಯವರು ಕೊಂಡುಕೊಂಡು ಸರ್ಕಾರ ಮಾಡಿದ್ರು. ಒಬ್ಬೊಬ್ಬರಿಗೆ 25 ಲಕ್ಷ ರೂ. ಖರ್ಚು ಮಾಡಿದರು. ಯಡಿಯೂರಪ್ಪ ಸಿಎಂ ಆದ್ರೂ, ಬೊಮ್ಮಾಯಿ ಸಿಎಂ ಆದ್ರೂ ಏನೂ ಮಾಡಲಿಲ್ಲ ಬರೀ ಲೂಟಿ ಮಾಡಿದ್ರು. ನಂತ್ರ ಜನ ನೀವು ನಮಗೆ ಆಶಿರ್ವಾದ ಮಾಡಿದ್ರಿ. ಬಿಜೆಪಿ ,ಜೆಡಿಎಸ್ಗೆ ಯಾವಾಗಲೂ ಜನ ಬೆಂಬಲ ಆಶಿರ್ವಾದ ಇರಲಿಲ್ಲ. ನಾವು ಗೆದ್ದ ಮೇಲೆ 5 ಗ್ಯಾರೆಂಟಿ ಕೊಡ್ತಿವಿ ಅಂತ ಹೇಳಿದ್ದೇವು. ಕೊಟ್ಟ ಮಾತಿನಂತೆ ನಡೆದುಕೊಂಡಿದ್ದೇವೆ, ನುಡಿದಂತೆ ನಡೆದಿದ್ದೇವೆ ಎಂದು ಬೊಬ್ಬರಿದಿದ್ದಾರೆ.