ಬೆಂಗಳೂರು: ಇಂದು ಬ್ಯಾಟರಾಯನಪುರದಲ್ಲಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಅವರು ವಿಷಯ ಪ್ರಮುಖರ ಕಾರ್ಯಾಗಾರ ನಡೆಸಿದರು. ಈ ವೇಳೆ ಮಾತನಾಡಿದ ಅವರು ಬಿಜೆಪಿ ಇತರ ಪಕ್ಷಗಳಂತಲ್ಲ, ತತ್ವ, ಸಿದ್ದಾಂತ, ಶಿಸ್ತು ಸಂಘಟನೆ ಹೊಂದಿರುವ ಪಕ್ಷವಾಗಿದೆ ಎಂದರು. ಅಲ್ಲದೆ, ಹಿಂದುತ್ವ ರಕ್ಷಣೆಗೆ ಆದ್ಯತೆ ನೀಡುತ್ತದೆ. ನವ ಭಾರತದ ನಿರ್ಮಾಣ ಕಲ್ಪನೆ ನಮ್ಮದು ಎಂಬ ಅರಿವು ಮೂಡಿಸುವ ಪ್ರಯತ್ನದಿಂದಾಗಿ ವಿಷಯ ಪ್ರಮುಖರ ಕಾರ್ಯಾಗಾರ ನಡೆಸಿದ್ದೇವೆ ಎಂದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್ ಕುಮಾರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷರಾದ ಬಿ. ನಾರಾಯಣ, ಪ್ರಶಿಕ್ಷಣಾ ಪ್ರಕೋಷ್ಠ ರಾಜ್ಯ ಸಂಚಾಲಕರಾದ ಶ್ರೀಕಾಂತ ಕುಲಕರ್ಣಿ, ಸಹ ಸಂಚಾಲಕರಾದ ಆರ್. ಕೆ. ಸಿದ್ದರಾಮಣ್ಣ ಹಾಗೂ ಪ್ರಮುಖರು ಉಪಸ್ಥಿತರಿದ್ದರು.
