ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಸಂಜು ಸ್ಯಾಮ್ಸನ್ ಗಾಯಗೊಂಡರು. ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಎಸೆದ ಬಾಲ್ ಸಂಜು ಬೆರಳಿಗೆ ತಗುಲಿತು. ರಾಜಸ್ಥಾನ ರಾಯಲ್ಸ್ ನಾಯಕ ಸಂಪೂರ್ಣವಾಗಿ ಫಿಟ್ ಆಗಲು ಸುಮಾರು 6-7 ವಾರಗಳ ಅಗತ್ಯ ಇದೆ.
ಹೀಗಾಗಿ ಐಪಿಎಲ್ನ ಮೊದಲ ಕೆಲವು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ.
ಐಪಿಎಲ್ನ ಮೊದಲ ಕೆಲವು ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಹೊರಗುಳಿಯುವ ಸಾಧ್ಯತೆಯಿದೆ. ಇದು ರಾಜಸ್ಥಾನ್ ರಾಯಲ್ಸ್ ತಂಡವನ್ನು ಸಹಜವಾಗಿಯೇ ಆತಂಕಕ್ಕೆ ತಳ್ಳಿದೆ. ಸಂಜು ಸ್ಯಾಮ್ಸನ್ ರಾಜಸ್ಥಾನ್ ರಾಯಲ್ಸ್ ತಂಡದಿಂದ ಹೊರಗುಳಿದರೆ, ಅವರ ಬದಲಿ ಆಟಗಾರ ಯಾರು? ಎಂಬ ಪ್ರಶ್ನೆಯೂ ಹುಟ್ಟಿಕೊಂಡಿದೆ. ಅವರಲ್ಲಿ ಮೂವರು ಆಟಗಾರರ ಹೆಸರು ಕೇಳಿಬಂದಿದೆ.
ಪಟ್ಟಿಯಲ್ಲಿ ಮೊದಲ ಹೆಸರು ಕನ್ನಡಿಗ ಮಾಯಾಂಕ್ ಅಗರ್ವಾಲ್. ಇತ್ತೀಚೆಗೆ ನಡೆದ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಅಗರ್ವಾಲ್ ಪ್ರದರ್ಶನ ಅತ್ಯುತ್ತಮವಾಗಿತ್ತು. 10 ಇನ್ನಿಂಗ್ಸ್ಗಳಲ್ಲಿ 651 ರನ್ ಗಳಿಸಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಗರ್ವಾಲ್ 93ರ ಅದ್ಭುತ ಸರಾಸರಿಯಲ್ಲಿ ರನ್ ಗಳಿಸಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್ ಬದಲಿಗೆ ಇನ್ನೊಬ್ಬ ಆಟಗಾರ ಬೇಕಾದರೆ ಮಯಾಂಕ್ ಅಗರ್ವಾಲ್ಗೆ ರಾಜಸ್ಥಾನ್ ರಾಯಲ್ಸ್ ಬಿಡ್ ಮಾಡಬಹುದು.
ಐಪಿಎಲ್ ಮೆಗಾ ಹರಾಜಿನಲ್ಲಿ ಸರ್ಫರಾಜ್ ಖಾನ್ ಮಾರಾಟವಾಗದೆ ಉಳಿದ್ದಾರೆ. ಸಂಜು ಬದಲಿಗೆ ಸರ್ಫರಾಜ್ ಖಾನ್ ಐಪಿಎಲ್ಗೆ ಮರಳಬಹುದು. ಭಾರತ ಪರ ಟೆಸ್ಟ್ ಪಂದ್ಯಗಳನ್ನು ಆಡಿರುವ ಸರ್ಫರಾಜ್ ಖಾನ್ ಐಪಿಎಲ್ನಲ್ಲಿ ಪ್ರತಿಭೆಯನ್ನು ತೋರಿಸಿದ್ದಾರೆ. ಐಪಿಎಲ್ನ 18ನೇ ಋತುವಿನಲ್ಲಿ ಸರ್ಫರಾಜ್ ಖಾನ್ ರಾಜಸ್ಥಾನ ರಾಯಲ್ಸ್ನ ಜೆರ್ಸಿಯಲ್ಲಿ ಕಂಡರೂ ಅಚ್ಚರಿ ಇಲ್ಲ.
ಪೃಥ್ವಿ ಶಾ ಕೂಡ ಹರಾಜಿನಲ್ಲಿ ಮಾರಾಟವಾಗದೇ ಉಳಿದಿದ್ದಾರೆ. ಪೃಥ್ವಿ ಶಾ ಅವರನ್ನು ಮೂಲ ಬೆಲೆಗೆ ಅರ್ಹರೆಂದು ಯಾವ ತಂಡ ಕೂಡ ಪರಿಗಣಿಸಲಿಲ್ಲ. ದೇಶೀಯ ಕ್ರಿಕೆಟ್ನಲ್ಲೂ ತಮ್ಮ ಛಾಪು ಮೂಡಿಸಲು ವಿಫಲರಾಗಿದ್ದಾರೆ. ಸಂಜು ಐಪಿಎಲ್ನಿಂದ ಹೊರಗುಳಿದರೆ ಪೃಥ್ವಿ ಶಾ ಅವರನ್ನು ತಂಡಕ್ಕೆ ಕರೆ ತರಬಹುದು.