ಬೆಂಗಳೂರು: ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಭೈರತಿ ಬಸವರಾಜ್ ಗೆ ಬಿಗ್ ರಿಲೀಫ್ ಸಿಕ್ಕಿದೆ. ಈ ಸಂಬಂಧ ಎಚ್ ಎ ಎಲ್ ಏರ್ಪೋರ್ಟ್ ಬಳಿ ಮಾಧ್ಯಮಗಳೊಂದಿಗೆ ಹೈಕೋರ್ಟ್ ನ ಹಿರಿಯ ವಕೀಲ ಬಿವಿ ಆಚಾರ್ಯ ಮಾತನಾಡಿ, ಸಚಿವರ ಮೇಲಿರುವ ಭೂ ಹಗರಣ ಸಂಬಂಧ ವಿಚಾರಣೆ ನಡೆಸಿದ ಹೈಕೋರ್ಟ್ ಪ್ರಕರಣವನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಿದೆ. ಸದ್ಯ ಇದು ಪ್ರೈವೇಟ್ ಪ್ರಕರಣವಾಗಿದ್ದು,
ಯಾವುದೇ FIR ದಾಖಲಾಗಿಲ್ಲ. ಇನ್ನೂ ಕೋರ್ಟ್ ನ ಸಮನ್ಸ್ ಇಟ್ಟುಕೊಂಡು ಸಚಿವರ ರಾಜೀನಾಮೆಯನ್ನು ಕೆಲವರು ಕೇಳುತ್ತಿದ್ದಾರೆ ಎಂದು ತಿಳಿಸಿದರು. ಸದ್ಯ ಈ ಪ್ರಕರಣವನ್ನು ಜನವರಿ ಎರಡನೇ ವಾರಕ್ಕೆ ಮುಂದೂಡಲಾಗಿದ್ದು, ಎಲ್ಲಾ ಸತ್ಯತೆ ತನಿಖೆಯ ನಂತರ ತಿಳಿಯಲಿದೆ ಎಂದು ವಕೀಲರು ಮಾಹಿತಿ ನೀಡಿದರು.
