ಬೆಂಗಳೂರು: ಸರ್ಕಾರದ ಗ್ಯಾರಂಟಿ ಯೋಜನೆಯ ಮತ್ತೊಂದು ಎಫೆಕ್ಟ್ ನೀಡಿದ್ದು ಶಿಕ್ಷಣ ಇಲಾಖೆಯಿಂದ ಇನ್ನೊಂದು ಮಹಾ ಎಡವಟ್ಟು ಆಗಿದೆ. ದಿನೇ ದಿನೇ ಸರ್ಕಾರ ಶಿಕ್ಷಣ ವಿಷಯದಲ್ಲಿ ಯಡವಟ್ಟಿನ ಸುರಿಮಳೆಗೈಯುತ್ತಿರುವುದು ನಿಜಕ್ಕೂ ನಾಚಿಗೇಡಿತನದ ಪರಮಾವಧಿಯಾಗಿದೆ.
ಹೌದು ಈಗ ಮತ್ತೊಂದು ಯಡವಟ್ಟು ಏನಾಪ್ಪ ಅಂದ್ರೆ, ಮಕ್ಕಳಿಗೆ ಮನೆಯಿಂದಲೇ ಉತ್ತರ ಪತ್ರಿಕೆ ತರಲು ಸೂಚನೆ ನೀಡಿದ್ದು ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತಾ ಪರೀಕ್ಷೆಗೆ ಉತ್ತರ ಪತ್ರಿಕೆ ತರಲು ಸೂಚನೆ ನೀಡಲಾಗಿದೆ. ಪ್ರಶ್ನೆ ಪತ್ರಿಕೆ ಮಾತ್ರ ಕೊಡಲು ಸಾಧ್ಯ, ಉತ್ತರ ಪತ್ರಿಕೆ ನೀವೇ ಪೂರೈಸಿ ಎಂದು ಆದೇಶ ನೀಡಲಾಗಿದೆ.
ಶಾಲಾ ಮುಖ್ಯಸ್ಥರಿಂದ ಮಕ್ಕಳ ಮೇಲೆ ಆರ್ಥಿಕ ಹೊರೆ ಶಿಫ್ಟ್ ಮಾಡಿದ್ದಲ್ಲದೇ ಒಂದು ಉತ್ತರ ಪತ್ರಿಕೆ ಕೊಡಲು ಬರಗೆಟ್ಟೋಯ್ತಾ ಸರ್ಕಾರ ಶಿಕ್ಷಣ ಇಲಾಖೆಗೆ ಮೂಲಭೂತ ಸೌಲಭ್ಯ ಕೊಡಲು ಆಗ್ತಿಲ್ವಾ ಮಕ್ಕಳಿಗೆ ಮನೆಯಿಂದಲೇ ಉತ್ತರ ಪತ್ರಿಕೆ ಕೊಟ್ಟು ಕಳುಹಿಸಲು ಆದೇಶ
Gruhalakshmi Yojane: ಮಹಿಳೆಯರಿಗೆ ಗುಡ್ನ್ಯೂಸ್ ಕೊಟ್ಟ ಲಕ್ಷ್ಮೀ ಹೆಬ್ಬಾಳ್ಕರ್ ! – ಇಲ್ಲಿದೆ ಕಂಪ್ಲೀಟ್ ಮಾಹಿತಿ!
ಎಸ್.ಎಸ್.ಎಲ್.ಸಿ ಪರೀಕ್ಷೆಗೆ ಈಗಾಗಲೇ ಮಕ್ಕಳದಿಂದ ತಲಾ 50 ರೂಪಾಯಿ ವಸೂಲಿ 50 ರೂಪಾಯಿ ಕೊಟ್ಟರೂ ಇದೀಗಾ ಉತ್ತರ ಪತ್ರಿಕೆ ನೀಡಲು ಹಿಂದೇಟು ಹೀಗಾಗಿ ಪ್ರಶ್ನೆ ಪತ್ರಿಕೆಗೆ 12 ರಿಂದ 15 ರೂ ವೆಚ್ಚವಾದರೂ, ಇನ್ನುಳಿದ ಹಣದಲ್ಲಿ ಉತ್ತರ ಪತ್ರಿಕೆ ಕೊಡಬಹುದು
ಪ್ರತಿ ವರ್ಷ ಪ್ರಶ್ನೆ ಪತ್ರಿಕೆ, ಉತ್ತರ ಪತ್ರಿಕೆಗಳನ್ನು ಶಿಕ್ಷಣ ಇಲಾಖೆಯಿಂದಲೇ ಒದಗಿಸಲಾಗುತ್ತದೆ ಆದರೆ ಈ ವರ್ಷ ಮಕ್ಕಳಿಂದ ಹಣ ವಸೂಲಿ ಮಾಡಲಾಗಿದ್ದು, ಉತ್ತರ ಪತ್ರಿಕೆ ತರಲು ಸೂಚನೆ ಶಿಕ್ಷಣ ಇಲಾಖೆಯ ಈ ಆದೇಶಕ್ಕೆ ಸಾಕಷ್ಟು ವಿರೋಧ