ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಸ್ಪಿನ್ ದಿಗ್ಗಜ ಹರ್ಭಜನ್ ಸಿಂಗ್ ಸ್ಫೋಟಕ ಮಾಹಿತಿ ಒಂದನ್ನ ಹೊರಹಾಕಿದ್ದಾರೆ.ಇಬ್ಬರೂ ಬ್ಯಾಟ್ಸ್ಮನ್ಗಳು ತಮ್ಮ-ತಮ್ಮ ಫಿಟ್ನೆಸ್ ಅನ್ನು ಸಂಪೂರ್ಣವಾಗಿ ಉಳಿಸಿಕೊಂಡರೆ ಇನ್ನೂ 2 ರಿಂದ 5 ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಬಹುದೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND Vs SL: ಈ ಸರಣಿಯಲ್ಲಿ ಒಂದೇ ಒಂದು ಎಸೆತವನ್ನು ಕೂಡ ನಾನು ನೋಡಲಿಲ್ಲ: ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್
“ರೋಹಿತ್ ಶರ್ಮಾ ಇನ್ನೂ ಎರಡು ವರ್ಷಗಳ ಕಾಲ ಸುಲಭವಾಗಿ ಕ್ರಿಕೆಟ್ ಆಡಬಹುದು. ವಿರಾಟ್ ಕೊಹ್ಲಿ ಅವರ ಫಿಟ್ನೆಸ್ ಅನ್ನು ನೀವು ಬೇರೆಯವರೊಂದಿಗೆ ಹೋಲಿಸಲು ಸಾಧ್ಯವಿಲ್ಲ. ಅವರು ಐದು ವರ್ಷಗಳ ಕಾಲ ಆಡುವುದನ್ನು ನೀವು ಸುಲಭವಾಗಿ ನೋಡಬಹುದು. ಅವರು ಬಹುಶಃ ತಂಡದಲ್ಲಿ ಅತ್ಯಂತ ಫಿಟ್ ಆಟಗಾರರಾಗಿದ್ದಾರೆ,” ಎಂದು ತಿಳಿಸಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 700 ಕ್ಕೂ ಹೆಚ್ಚು ವಿಕೆಟ್ ಪಡೆದಿರುವ ಈ ಮಾಜಿ ಆಫ್ ಸ್ಪಿನ್ನರ್, “ಫಿಟ್ನೆಸ್ ವಿಷಯದಲ್ಲಿ ವಿರಾಟ್ ಕೊಹ್ಲಿ ಅವರೊಂದಿಗೆ ಸ್ಪರ್ಧಿಸಲು ನೀವು ಯಾವುದೇ 19 ವರ್ಷದ ಯುವಕರನ್ನು ಕೇಳಬಹುದು ಮತ್ತು ಅವರನ್ನು ವಿರಾಟ್ ಕೊಹ್ಲಿ ಸುಲಭವಾಗಿ ಸೋಲಿಸುತ್ತಾರೆ. ಅವರು ತುಂಬಾ ಫಿಟ್ ಆಗಿದ್ದಾರೆ. ವಿರಾಟ್ ಮತ್ತು ರೋಹಿತ್ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ ಎಂದು ನಾನು ನಂಬುತ್ತೇನೆ ಮತ್ತು ಅವರು ಎಷ್ಟು ಸಮಯ ಆಡಲು ಬಯಸುತ್ತಾರೆ ಎಂಬುದು ಸಂಪೂರ್ಣವಾಗಿ ಅವರಿಗೆ ಬಿಟ್ಟದ್ದು. ಇಬ್ಬರೂ ಫಿಟ್ ಆಗಿ ಉಳಿದು ತಮ್ಮ ಪ್ರದರ್ಶನದ ಮೂಲಕ ತಂಡದ ಗೆಲುವಿಗೆ ಕೊಡುಗೆ ನೀಡಿದರೆ, ನಂತರ ಅವರು ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿದ್ದಾರೆ,” ಎಂದರು.