ಬಿಗ್ಬಾಸ್ ಮನೆಯಿಂದ ಭಾಗ್ಯಶ್ರೀ ಔಟ್ ಆಗಿದ್ದಾರೆ. ತಮ್ಮ ಹೆಸರಿನಲ್ಲಿಯೇ ಭಾಗ್ಯವನ್ನು ಇರಿಸಿಕೊಂಡಿರುವ ಭಾಗ್ಯಶ್ರೀ ಅವರಿಗೆ ಬಿಗ್ಬಾಸ್ ಮನೆಯೊಳಗೂ ಅನೇಕ ಸಲ ಭಾಗ್ಯವೇ ಕೈ ಹಿಡಿದಿತ್ತು.
ಮಾತು ಮಾತಿಗೂ ಕಣ್ಣೀರು ಸುರಿಸುವ ಅವರ ಸ್ವಭಾವದಿಂದ ಅಳುಮುಂಜಿಯಾಗಿ ಬಿಂಬಿತವಾಗಿದ್ದರೂ, ಅವರು ಇಷ್ಟು ವಾರಗಳ ಕಾಲ ಬಿಗ್ಬಾಸ್ ಮನೆಯಲ್ಲಿ ಉಳಿದುಕೊಂಡಿದ್ದರು. ಹಾಗೆ ನೋಡಿದರೆ ಎರಡು ವಾರಗಳ ಹಿಂದೆಯೇ ಅವರು ಬಿಗ್ಬಾಸ್ ಮನೆಯಿಂದ ಹೊರಗೆ ಹೋಗಬೇಕಾಗಿತ್ತು. ಸುದೀಪ್ ಅವರು, ಭಾಗ್ಯಶ್ರೀ ಎಲಿಮಿನೇಟ್ ಆಗಿರುವ ಸಂಗತಿಯನ್ನು ಘೋಷಿಸಿದ್ದರು ಕೂಡ. ಆದರೆ ಬಿಗ್ಬಾಸ್ ಮನೆಯ ಬಾಗಿಲು ತೆರೆದಿರಲಿಲ್ಲ. ಆ ವಾರ ಹಬ್ಬದ ಕಾರಣಕ್ಕಾಗಿ ಯಾರನ್ನೂ ಎಲಿಮಿನೇಟ್ ಮಾಡದೇ ಉಳಿಸಿಕೊಂಡಿದ್ದರು ಬಿಗ್ಬಾಸ್. ಅದರ ಮುಂದಿನ ವಾರ ಪ್ರತಾಪ್ ಅವರು ಭಾಗ್ಯಶ್ರೀಯನ್ನು ನಾಮಿನೇಷನ್ ಪಟ್ಟಿಯಿಂದಲೇ ಪಾರುಮಾಡಿದ್ದರು. ಅದಾದ ಮೇಲೆ, ವರ್ತೂರು ಸಂತೋಷ್ ಅವರ ಕಾರಣದಿಂದ ಇನ್ನೊಂದು ವಾರ ಎಲಿಮಿನೇಷನ್ ನಡೆದಿರಲಿಲ್ಲ.
ಈ ವಾರ ಡಬಲ್ ಎಲಿಮಿನೇಷನ್ನೊಂದಿಗೆ ಕಿಚ್ಚ ವೀಕೆಂಡ್ ಎಪಿಸೋಡಿಗೆ ಬಂದಿದ್ದರು. ಅದರ ಪ್ರಕಾರ ಶನಿವಾರದ ಪಂಚಾಯ್ತಿಯಲ್ಲಿ ಇಶಾನಿ ಅವರು ಎಲಿಮಿನೇಟ್ ಆಗಿದ್ದರು. ಇಂದು ಭಾಗ್ಯಶ್ರೀ ಮನೆಯಿಂದ ಹೊರಗೆ ಹೋಗುತ್ತಿರುವ ವಿಷಯವನ್ನು ಸುದೀಪ್ ಪ್ರಕಟಪಡಿಸಿದರು.
ಮುಂದಿನ ವಾರ ಇಶಾನಿ ಮತ್ತು ಭಾಗ್ಯಶ್ರೀ ಅನುಪಸ್ಥಿತಿಯಲ್ಲಿ ಬಿಗ್ಬಾಸ್ ಸ್ಪರ್ಧಿಗಳು ಮನೆಯಲ್ಲಿ ಮುಂದುವರಿಯಲಿದ್ದಾರೆ. ಮನೆಯ ಸದಸ್ಯರ ಪೈಕಿ ಇಬ್ಬರು ಕಡಿಮೆಯಾಗಿರುವುದು ಸ್ಪರ್ಧೆಯನ್ನು ಇನ್ನಷ್ಟು ಚುರುಕುಗೊಳಿಸಿದೆ