ನಿಸರ್ಗದಿಂದ ಸಿಗುವ ಯಾವುದೇ ವಸ್ತುವಾದರೂ ಅಷ್ಟೇ. ತುಂಬಾ ಆರೋಗ್ಯಕರ. ನಿಸರ್ಗದ ಮಡಿಲಿನಿಂದ ಸಿಗುವ ಪ್ರತಿಯೊಂದು ಆಹಾರ ಕೂಡ ನಮಗೆ ಉತ್ತಮ ಆರೋಗ್ಯವನ್ನು ದಯಪಾಲಿಸುತ್ತದೆ. ಯಾವುದೇ ತರಹದ ಅಡ್ಡ ಪರಿಣಾಮಗಳು ಎದುರಾಗುವುದಿಲ್ಲ. ಒಂದು ವೇಳೆ ಆದರೂ ತುಂಬಾ ಕಡಿಮೆ. ಊಟ ಆದ ತಕ್ಷಣ ಪ್ರತಿಯೊಬ್ಬರೂ ಎಲೆ ಅಡಿಕೆ ಹಾಕಿಕೊಳ್ಳಬೇಕು ಎಂದು ಹೇಳುತ್ತಾರೆ.
ಈ ರಾಶಿಯವರಿಗೆ ಜಾತಕದಲ್ಲಿ ಧನಪ್ರಾಪ್ತಿ ಯೋಗ ಇದೆ ಆದರೆ ವಾಸ್ತವ ವಿಭಿನ್ನ: ಸೋಮವಾರದ ರಾಶಿ ಭವಿಷ್ಯ 10 ಫೆಬ್ರವರಿ 2025!
ದೇಹದಲ್ಲಿ ಯೂರಿಕ್ ಆಸಿಡ್ ಮಟ್ಟವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ. ಇವುಗಳ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ಸಹ ಯೂರಿಕ್ ಆಸಿಡ್ ಮಟ್ಟವನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.
ರಾಷ್ಟ್ರೀಯ ಜೈವಿಕ ತಂತ್ರಜ್ಞಾನ ಮಾಹಿತಿ ಕೇಂದ್ರ ದ ವರದಿಯ ಪ್ರಕಾರ, ವೀಳ್ಯೆದೆಲೆ ಅನೇಕ ಔಷಧೀಯ ಗುಣಗಳಿಂದ ಸಮೃದ್ಧವಾಗಿದೆ. ಇದನ್ನು ಜಗಿಯುವುದರಿಂದ ಯೂರಿಕ್ ಆಸಿಡ್ ಮಟ್ಟ ಸ್ವಲ್ಪ ಮಟ್ಟಿಗೆ ಕಡಿಮೆಯಾಗುತ್ತದೆ. ವೀಳ್ಯೆದೆಲೆಗಳು ಉತ್ಕರ್ಷಣ ನಿರೋಧಕಗಳು ಮತ್ತು ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ದೇಹದಿಂದ ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ವೀಳ್ಯೆದೆಲೆಗಳು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಯೂರಿಕ್ ಆಮ್ಲವನ್ನು ನಿಯಂತ್ರಿಸುತ್ತದೆ. ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ವೀಳ್ಯೆದೆಲೆಯ ರಸವು ಮಲಬದ್ಧತೆ ಸಮಸ್ಯೆ ನಿವಾರಣೆಗೆ ಸಹಾಯ ಮಾಡುತ್ತದೆ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ, ಬಾಯಿಯ ದುರ್ವಾಸನೆಯನ್ನು ಹೋಗಲಾಡಿಸುತ್ತದೆ ಮತ್ತು ಹಲ್ಲಿನ ಆರೋಗ್ಯವನ್ನು ಸುಧಾರಿಸುತ್ತದೆ. ದೇಹದಲ್ಲಿ ಮೈ-ಕೈ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ
ವೀಳ್ಯೆದೆಲೆಗಳಲ್ಲಿ ವಿಟಮಿನ್ ಸಿ, ಕ್ಯಾಲ್ಸಿಯಂ ಮತ್ತು ಕಬ್ಬಿಣಾಂಶವಿದ್ದು, ಇದು ದೇಹಕ್ಕೆ ಅಗತ್ಯವಿರುವ ಶಕ್ತಿಯನ್ನು ಒದಗಿಸುತ್ತದೆ. ಇದು ನೈಸರ್ಗಿಕ ಉರಿಯೂತ ನಿವಾರಕ ಗುಣಗಳನ್ನು ಹೊಂದಿದ್ದು, ದೇಹದಲ್ಲಿ ನೋವು ಮತ್ತು ಊತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ ವೀಳ್ಯೆದೆಲೆಯನ್ನು ಕೆಲವೊಮ್ಮೆ ಬಾಯಿ ಹುಣ್ಣು ಮತ್ತು ಗಾಯಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ
ಆದರೆ, ತಂಬಾಕು ಅಥವಾ ಸುಣ್ಣದೊಂದಿಗೆ ಬೆರೆಸಿದ ವೀಳ್ಯೆದೆಲೆ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಸಾಮಾನ್ಯ ವೀಳ್ಯದೆಲೆಗಳನ್ನು ಅಗಿಯುವುದರಿಂದ ನೀವು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಆದರೆ, ನಿಯಮಿತವಾಗಿ ವೀಳ್ಯೆದೆಲೆಗಳನ್ನು ಸೇವಿಸುವ ಮುನ್ನ ಆಯುರ್ವೇದ ತಜ್ಞರನ್ನು ಸಂಪರ್ಕಿಸುವುದು ಸೂಕ್ತ.
ಇದಲ್ಲದೇ, ವೀಳ್ಯೆದೆಲೆಯಲ್ಲಿ ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವಿದೆ. ಮಳೆಗಾಲ ಹಾಗೂ ಚಳಿಗಾಲದಲ್ಲಿ ನಮಗೆ ಕಾಡುವ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳನ್ನು ಇದು ದೂರ ಮಾಡುತ್ತದೆ. ಆರೋಗ್ಯಕರವಾದ ಜೀರ್ಣ ಶಕ್ತಿಯ ಜೊತೆಗೆ ನಮ್ಮ ದೈಹಿಕ ಆರೋಗ್ಯದ ರಕ್ಷಣೆ ಕೂಡ ಮಾಡುತ್ತದೆ.