ಬೆಂಗಳೂರು:ಬಿಎಂಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ಯುವ ಮತದಾರರ ನೋಂದಣಿ ಕಾರ್ಯಕ್ರಮ ವನ್ನು ಬಿಬಿಎಂಪಿ ಚುನಾವಣಾ ವಿಭಾಗದ ವಿಶೇಷ ಆಯುಕ್ತ ಶ್ರೀ ಆರ್ ರಾಮಚಂದ್ರನ್ ಅವರು ಇಂದು ಉದ್ಘಾಟಿಸಿದರು.

ದೇಶದೆಲ್ಲೆಡೆ ಇಂದು ಮತದಾರರ ಪಟ್ಟಿಯ ಸಂಕ್ಷಿಪ್ತ ಪರಿಷ್ಕರಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮತದಾರರ ಜಾಗೃತಿ ವೇದಿಕೆ (Voters Awareness Forum) ಮತ್ತು ಚುನಾವಣಾ ಸಾಕ್ಷರತಾ ಕ್ಲಬ್ (Electoral Literact Club) ಗಳನ್ನೂ ಸಹಾ ಉದ್ಘಾಟಿಸಿದರು.
ಬಿಎಂಎಸ್ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಡಾ. ಬಿ. ಪದ್ಮ, ಚುನಾವಣಾ ಸಾಕ್ಷರತಾ ಕ್ಲಬ್ ನ ಸಂಚಾಲಕಿ ಡಾ. ಕೆ ವೀಣಾ, ಸಂಯೋಜಕಿ ಶ್ರೀಮತಿ ಬಿ. ಭಾನು ಹಾಗೂ ಸುಮಾರು 1000 ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

