ಬೆಂಗಳೂರು: ಬೆಂಗಳೂರಿಗೆ ಬರುವ ಪಾದಯಾತ್ರೆಯನ್ನು ಜನ ವಿರೋಧಿಸುತ್ತಿದ್ದಾರೆ ಅಂತ ಸುದ್ದಿಗೋಷ್ಠಿಯಲ್ಲಿ ಶಾಸಕ ಸತೀಶ್ ರೆಡ್ಡಿ ಹೇಳಿದರು. ಉದ್ದೇಶ ಪೂರಕವಾಗಿ ಪಾದಯಾತ್ರೆ ನಡೆಸಿ ಕೊರೊನಾ ಹರಡುತ್ತಿದ್ದಾರೆ. ಬೆಂಗಳೂರು ಜನರ ಮನೋಭಾವನೆಯನ್ನು ಕೋರ್ಟ್ ಕೂಡ ಪ್ರಶ್ನಿಸಿದೆ. ನಮಗೂ ಜನ ಕರೆಸಲು ಬರುತ್ತದೆ. ಆದ್ರೆ ಬೆಂಗಳೂರು ಜನರ ಪ್ರಾಣ ಮುಖ್ಯ.
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ಬೆಂಗಳೂರಿನಲ್ಲಿ ಒಂದುವರೆ ಕೋಟಿ ಜನ ಇದ್ದಾರೆ. ಅವರಿಗೆ ಹರಡಿಸುವ ಕೆಲಸ ಮಾಡಬೇಡಿ. ವಿಶ್ವ ಆರೋಗ್ಯ ಸಂಸ್ಥೆ ಕೂಡಾ ಬೆಂಗಳೂರು ಡೇಂಜರ್ ಅಂತ ಎಚ್ಚರಿಕೆ ನೀಡಿದೆ. ಪಾದಯಾತ್ರೆಯನ್ನ ತಡೆಯದಿದ್ರೆ ಬೆಂಗಳೂರಿನ ಜನ ನಿಮ್ಮನ್ನು ತಿರಸ್ಕರಿಸುತ್ತಾರೆ. ನಾವು ಕೂಡಾ ನಿಮ್ಮ ಪಾದಯಾತ್ರೆ ವಿರೋಧಿಸಿ ಪ್ರತಿಭಟನೆ ನಡೆಸುತ್ತೇವೆ ಅಂತ ತಿಳಿಸಿದರು.
