ಬೆಂಗಳೂರು: ಬಡವರ ಹಸಿವು ನೀಗಿಸುವ ಇಂದಿರಾ ಕ್ಯಾಂಟೀನ್ ಗಳ ಮತ್ತೊಂದು ಅವ್ಯವಸ್ಥೆಯಿದು. ಅರ್ಧ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಗಳಲ್ಲಿ (Indira Canteen) ಇಡ್ಲಿ ಸೇರಿ ಕೆಲ ಉಪಹಾರವನ್ನ ನಿಲ್ಲಿಸಲಾಗಿದೆ.
ಕೆ.ಆರ್ ಸಮೀಪದ ಎಸ್ ಪಿ ರಸ್ತೆಯಲ್ಲಿರೋ ಇಂದಿರಾ ಕಿಚನ್ ನಲ್ಲಿ ಇಡ್ಲಿ (Idli) ಸೇರಿ ಕೆಲ ಉಪಹಾವನ್ನ ತಯಾರಿಸುವ ಯಂತ್ರೋಪಕರಣಗಳು ಹಳೆಯದಾಗಿ, ಹಾಳಾಗಿವೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಗಳಿಗೆ ಇಡ್ಲಿ ಸಪ್ಲೈ ಆಗ್ತಿಲ್ಲ. ಇನ್ನೂ ಕೆಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಊಟ ಸಪ್ಲೈ ಆಗ್ತಿದೆ. ಇತ್ತ ವಿಶ್ವೇಶ್ವಪುರಂ ವಾರ್ಡ್ 174 ರ ಇಂದಿರಾ ಕ್ಯಾಂಟೀನ್ ನಲ್ಲಿ ಇಡ್ಲಿ ಕೇಳಿದ ಗ್ರಾಹಕರ ಮೇಲೆ ಅಲ್ಲಿನ ಸಿಬ್ಬಂದಿಯೊಬ್ಬರು ದರ್ಪ ಮೆರೆದಿದ್ದಾರೆ. ಇಡ್ಲಿ ಸಿಗಲ್ಲ, ನಾವು ಕೊಟ್ಟಾಗಷ್ಟೆ ತಿನ್ನಬೇಕು. ಬೇಕಿದ್ರೆ ಪಕ್ಕದಲ್ಲೇ ಖಾಸಗಿ ಹೊಟೇಲ್ ಇದೆ. ಅಲ್ಲಿಗೆ ಹೋಗ್ರಿ ಅಂತ ಧಿಮಾಕು ತೋರಿಸಿದ್ದಾರೆ.
Breaking News: ಹಿರಿಯ ನಟಿ ಲೀಲಾವತಿ ತೋಟದ ಗೇಟ್ ಬಳಿ ಚಿರತೆ ಪ್ರತ್ಯಕ್ಷ
ಎರಡ್ಮೂರು ತಿಂಗಳಿನಿಂದ ಇಂದಿರಾ ಕ್ಯಾಂಟೀನ್ ಗಳಲ್ಲಿ ಬೆಳಗ್ಗಿನ ಸಮಯದಲ್ಲಿ ತಿಂಡಿ, ರಾತ್ರಿ ಹೊತ್ತಲ್ಲಿ ಊಟ ಸಿಗ್ತಿಲ್ಲ. ಇಂದಿರಾ ಕ್ಯಾಂಟೀನ್ ಗಳಿಗೆ ಊಟ ಸಪ್ಲೈ ಮಾಡೋಕೆ ಟೆಂಡರ್ ಪಡೆದಿದ್ದ ಮೂರು ಕಂಪನಿಗಳಿಗೆ ಬಿಬಿಎಂಪಿ ಹಣ ನೀಡಿಲ್ಲ. ಅಡ್ವಾನ್ಸ್ ಆಗಿ ಶೇ. 50% ರಷ್ಟು ಹಣವನ್ನ ನೀಡಬೇಕಿತ್ತು. ಈ ಹಣವನ್ನ ನೀಡದ ಕಾರಣ ಕ್ವಾಲಿಟಿ ಊಟ ಹಾಗೂ ಟೈಂ ಟು ಟೈಂ ಊಟ ತಲುಪಿಸೋಕೆ ಟೆಂಡರ್ ಪಡೆದ ಕಂಪನಿಗಳಿಗೂ ಆಗ್ತಿಲ್ಲ.