ಬೆಂಗಳೂರು: ವೈಟ್ ಫೀಲ್ಡ್ ನ ಪ್ರತಿಷ್ಠಿತ ಶಾರ್ಟನ್ ಹೋಟೆಲ್ ನಲ್ಲಿ ಆಯೋಜಿಸಲಾಗಿದ್ದ ಕಬ್ಬಡಿಯ ಮೊದಲ ಪಂದ್ಯದಲ್ಲಿ ಬೆಂಗಳೂರು ಬುಲ್ಸ್ ತಂಡ ಸೋಲು ಕಂಡಿದೆ. ಯು ಮುಂಬಾಗೆ ಬಲಿಷ್ಠ ಪೈಪೋಟಿ ನೀಡಿದ್ದ ಬೆಂಗಳೂರು ಬುಲ್ಸ್ ತಂಡ, ಕೊನೆಯ ಹಂತದಲ್ಲಿ ಸೋತಿದೆ. ಪವನ್ಕುಮಾರ್ ಆರಂಭದಲ್ಲಿ ಅಬ್ಬರಿಸಿದ್ದರೆ, ಸೆಕೆಂಡ್ ಹಾಫ್ ನಲ್ಲಿ ಅವರ ಆಟ ನಡೆಯಲಿಲ್ಲ. ಕೇವಲ ಪಂದ್ಯ ಮುಗಿಯಲು 5 ನಿಮಿಷ ಇರುವಾಗ ಬೆಂಗಳೂರು ಬುಲ್ಸ್ ತಂಡ ಯು ಮುಂಬಾಗೆ ಹೆಚ್ಚು ಪಾಯಿಂಟ್ಸ್ ನೀಡಿತು. ಹೀಗಾಗಿ ಕೊನೆಯ ಹಂತದಲ್ಲಿ ಬೆಂಗಳೂರು ಬುಲ್ಸ್ ತಂಡ ಎಡವಿದೆ. ಬೆಂಗಳೂರು ಬುಲ್ಸ್ 30 ಅಂಕ ಗಳಿಸಿದ್ರೆ, ಯು ಮುಂಬಾ 46 ಅಂಕಗಳಿಸಿ ಗೆದ್ದು ಬೀಗಿದೆ ಎಂದು ಹೇಳಲಾಗಿದೆ.
