ಬೆಂಗಳೂರು: ನಗರದಲ್ಲಿ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದವರ ಕೇಸ್ ರದ್ದತಿಗೆ ಹೈಕೋರ್ಟ್ ನಿರಾಕರಣೆ ವ್ಯಕ್ತಪಡಿಸಿದೆ. ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದವರ ಕೇಸ್ ರದ್ದತಿಗೆ ನಕಾರ ಎಂದು ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ. ಪತ್ರಕರ್ತರೆಂದು ಹೇಳಿ ಸಾಕ್ಷಿಗಳಿಗೆ ಬೆದರಿಕೆ ಆರೋಪ ಕೇಳಿಬಂದಿತ್ತು. ಅಬ್ದುಲ್‌ನಾಸಿರ್ ಮದನಿ ವಿರುದ್ಧ ಸಾಕ್ಷ್ಯ ಹೇಳದಂತೆ ಬೆದರಿಕೆ ಹೇರಲಾಗಿತ್ತು.
ಕೆ.ಕೆ.ಶಹೀನಾ, ಸುಬೇರ್ ಪಡುಪು, ಉಮ್ಮರ್ ಮೌಲ್ವಿ ಬೆದರಿಕೆ ಹಾಕಿದ್ದರು. ಸಾಕ್ಷಿಗಳ ಸಂದರ್ಶನ ನೆಪದಲ್ಲಿ ಬೆದರಿಕೆ ಆರೋಪ ಹಾಕಲಾಗಿತ್ತು. ಈ ಸಂಬಂಧ ಕೊಡಗಿನ ಯೋಗಾನಂದ್, ರಫೀಕ್ ದೂರು ದಾಖಲಿಸಿದ್ದರು. ಪ್ರಕರಣದಿಂದ ಕೈಬಿಡುವಂತೆ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಇದೀಗ ಅರ್ಜಿ ವಜಾಗೊಳಿಸಿ ಹೈಕೋರ್ಟ್ ಏಕಸದಸ್ಯ ಪೀಠ ಆದೇಶ ನೀಡಿದೆ.
