Facebook Twitter Instagram YouTube
    ಕನ್ನಡ     English     తెలుగు
    Sunday, January 29
    Facebook Twitter Instagram YouTube
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    ಕನ್ನಡ     English     తెలుగు
    Facebook Twitter Instagram YouTube
    Home » Pro Kabaddi League: ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್..!

    Pro Kabaddi League: ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಗೆಲುವು ಸಾಧಿಸಿದ ಬೆಂಗಳೂರು ಬುಲ್ಸ್..!

    ain userBy ain userDecember 27, 2021
    Share
    Facebook Twitter LinkedIn Pinterest Email

    ಬೆಂಗಳೂರು: ಪ್ರೋ ಕಬ್ಬಡಿ ಲೀಗ್​ನ 14ನೇ ಪಂದ್ಯದಲ್ಲಿ ನಾಯಕ ಪವನ್​ ಶೆರಾವತ್​ ಅವರ ಅಬ್ಬರದ ನೆರವಿನಿಂದ ಬೆಂಗಳೂರು ಬುಲ್ಸ್​ ತಂಡ ಒಂದು ಅಂಕದ ಅಂತರದಿಂದ ಬೆಂಗಾಲ್ ವಾರಿಯರ್ಸ್ ವಿರುದ್ಧ ರೋಚಕ ಜಯ ಸಾಧಿಸಿದೆ. ಬೆಂಗಳೂರಿನ ವೈಟ್​ಫೀಲ್ಸ್​ನ ಶೆರಾಟನ್ ಗ್ರ್ಯಾಂಡ್​ ಹೋಟೆಲ್​ ಮತ್ತು ಕನ್ವೆನ್ಷನ್​ ಸೆಂಟರ್​ನಲ್ಲಿ ನಡೆದ ಪಂದ್ಯದಲ್ಲಿ ಬೆಂಗಳೂರು ಬುಲ್ಸ್​ 36-35 ಅಂಕದ ಅಂತರದಲ್ಲಿ ರೋಚಕ ಜಯ ಸಾಧಿಸಿತು.

    ಪಂದ್ಯದ ಮೊದಲ 5 ನಿಮಿಷಗಳಲ್ಲೇ ಬೆಂಗಳೂರು ತಂಡ ಆಲೌಟ್ ಆಗುವ ಮೂಲಕ ಭಾರಿ ಹಿನ್ನಡೆ ಅನುಭವಿಸಿತು. ಆದರೆ ಆಲೌಟ್ ಆದರ ನಂತರ ಅದ್ಭುತವಾಗಿ ಕಮ್​ಬ್ಯಾಕ್ ಮಾಡಿದ ಪವನ್​ ಶೆರಾವತ್​ ಮೊದಲಾರ್ಧದ ವೇಳೆಗೆ 18-18ರಲ್ಲಿ ಸಮಬಲಕ್ಕೆ ತಂದು ನಿಲ್ಲಿಸಿದರು. ದ್ವಿತೀಯಾರ್ಧದಲ್ಲಿ ಕೊನೆಯ ನಿಮಿಷದ ವರೆಗೂ ಈ ಪೈಪೋಟಿ ಹೀಗೆ ಮುಂದುವರಿದಿತ್ತು.ಕೊನೆಯ ನಿಮಿಷದಲ್ಲಿ 33-33 ಅಂಕಗಳ ಸಮಬಲ ಇದ್ದಾಗ ಡಾಂಗ್​ ಜಿಯೋನ್​ ಲೀ 2 ಅಂಕ ಪಡೆದು ಬುಲ್ಸ್​ ಮುನ್ನಡೆಯನ್ನು 35-33ಕ್ಕೆ ಹೆಚ್ಚಿಸಿ ಬುಲ್ಸ್​ಗೆ ಟರ್ನಿಂಗ್ ಪಾಯಿಂಟ್​ ತಂದುಕೊಟ್ಟರು.

    Demo

    ನಂತರ ಬೆಂಗಾಲ್​ ಮಣೀಂದರ್ ಸಿಂಗ್​​ ಒಂದು ಅಂಕ ಪಡೆದು 35-34ಕ್ಕೆ ಅಂತರವನ್ನು ತಗ್ಗಿಸಿದರೆ, ಮತ್ತೆ ಪವನ್​ ಒಂದು ಅಂಕ ಪಡೆದು 2 ಅಂಕ ಲೀಡ್​ಗೆ ತಂದು ನಿಲ್ಲಿಸಿದರು. ಪಂದ್ಯದ ಕೊನೆಯ ರೈಡಿಂಗ್​ನಲ್ಲಿ ಬೆಂಗಳೂರಿನ ಅನುಭವಿ ಡಿಫೆಂಡರ್​ ಮಹೇಂದರ್​ ಸಿಂಗ್ ತಾವಾಗಿಯೇ ಶರಣಾಗಿ ಒಂದು ಅಂಕವನ್ನು ಮಾತ್ರ ಬಿಟ್ಟುಕೊಟ್ಟು 36-35ರಲ್ಲಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು.

    ಬೆಂಗಳೂರು ಪರ ರೈಡಿಂಗ್​ನಲ್ಲಿ ನಾಯಕ ಪವನ್ ಕುಮಾರ್ ಶೆರಾವತ್​ 15, ಚಂದ್ರನ್ ರಂಜಿತ್​ 6 ಅಂಕ ಪಡೆದರೆ, ಡಿಫೆಂಡಿಂಗ್​ನಲ್ಲಿ ಮಹೇಂದರ್​ ಸಿಂಗ್ , ಅಮನ್​ ತಲಾ 2 ಅಂಕ ಪಡೆದು ಉತ್ತಮ ಪ್ರದರ್ಶನ ತೋರಿದರು. ಬೆಂಗಾಲ್​ ವಾರಿಯರ್​ ಪರ ರೈಡರ್​ ಮಣೀಂದರ್​ ಸಿಂಗ್ 17, ಆಲ್​ರೌಂಡರ್​ ಇಸ್ಮಾಯಿಲ್ ನಬೀಬಕ್ಷ್​ 8 ಅಂಕ ಪಡೆದು ಮಿಂಚಿದರು.

     

    Share. Facebook Twitter LinkedIn Email WhatsApp

    Related Posts

    Axar Patel.. ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಮ್ ಇಂಡಿಯಾ ಆಲ್ ರೌಂಡರ್ ಅಕ್ಷರ್ ಪಟೇಲ್..!

    January 29, 2023

    Women’s Premier League.. 5 ತಂಡಗಳ ಹರಾಜಿನ ಮೂಲಕ 4669.99 ಕೋಟಿ ರೂ. ಗಳಿಸಿದ BCCI

    January 28, 2023

    ರಣಜಿ ಟ್ರೋಫಿ ಟೂರ್ನಿಯಲ್ಲಿ ಮತ್ತೊಮ್ಮೆ ಉತ್ತಮ ಆರಂಭ ಪಡೆದ ಕರ್ನಾಟಕ

    January 27, 2023

    Hockey World Cup.. ಇಂದು ಬೆಲ್ಜಿಯಂ-ನೆದರ್ ಲೆಂಡ್ಸ್ ಹೋರಾಟ: ಆಸ್ಟ್ರೇಲಿಯಾಗೆ ಜರ್ಮನಿ ಸವಾಲು

    January 27, 2023

    ಮೇರಿ ನೇತೃತ್ವದ ಸಮಿತಿ ಬಗ್ಗೆ ಕುಸ್ತಿಪಟುಗಳ ಬೇಸರ..!

    January 27, 2023

    Australian Open.. ಆಸ್ಪ್ರೇಲಿಯನ್ ಓಪನ್ ಟೂರ್ನಿಯಲ್ಲಿ ವಿಕ್ಟೋರಿಯಾ ಅಜರೆಂಕಾ ಸೆಮೀಸ್ ಪ್ರವೇಶ

    January 27, 2023
    © 2022 Copyright � All rights reserved AIN Developed by Notch IT Solutions..
    • Home
    • About Us
    • Contact Us
    • Privacy & Cookies Notice
    • Advertise with Us
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಚಲನಚಿತ್ರ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ಜ್ಯೋತಿಷ್ಯ
    • ತಂತ್ರಜ್ಞಾನ
    • ಕೃಷಿ
    • ವಿಡಿಯೋ
    • ಅರೋಗ್ಯ
    • ಗ್ಯಾಲರಿ
    • ಸಂಸ್ಕೃತಿ

    Type above and press Enter to search. Press Esc to cancel.