ಬಳ್ಳಾರಿ:- ಫೆ. 28 ರಿಂದ ಮಾ.2ರವರೆಗೆ ವಿಜಯನಗರದ ಗತ ವೈಭವ ಸಾರುವ ಹಂಪಿ ಉತ್ಸವ ನಡೆಯಲಿದೆ.
ರೈತರು ಸರ್ಕಾರದ ವಿರುದ್ಧ ಎದೆಯುಬ್ಬಿಸಿ ಮಾತನಾಡುವ ಶಕ್ತಿ ನೀಡಿದ್ದು, ದಿ.ಪ್ರೋ : ನಂಜುಂಡಸ್ವಾಮಿ
ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರಿಂದ ಹಂಪಿ ಉತ್ಸವ ಉದ್ಘಾಟನೆ ನಡೆಯಲಿದೆ. 5 ವೇದಿಕೆಗಳಲ್ಲಿ ಹಂಪಿ ಉತ್ಸವದ ಕಾರ್ಯಕ್ರಮಗಳು ನಡೆಯಲಿದ್ದು ಮುಖ್ಯ ವೇದಿಕೆಗೆ ಹಂಪಿ ಉತ್ಸವದ ರೂವಾರಿ ಎಂಪಿ ಪ್ರಕಾಶ್ ಅವರ ಹೆಸರು ಬಹುತೇಕ ಫೈನಲ್ ಆಗುವ ಸಾಧ್ಯತೆಯಿದೆ.
ಅಂದಾಜು 10 ಲಕ್ಷ ಜನರು ಸೇರುವ ನೀರಿಕ್ಷೆಯಿದ್ದು ಮುಖ್ಯ ವೇದಿಕೆಯಲ್ಲಿ 50 ಸಾವಿರದಿಂದ 70 ಸಾವಿರ ಆಸನದ ವ್ಯವಸ್ಥೆ ಮಾಡಲು ಸಿದ್ಧತೆ ನಡೆದಿದೆ. ಗಾಯತ್ರಿ ಪೀಠದ ಬಳಿ ಮುಖ್ಯ ವೇದಿಕೆ, ಎದುರು ಬಸವಣ್ಣ, ಸಾಸಿವೆ ಕಾಳು ಗಣಪ, ವಿರೂಪಾಕ್ಷ ದೇಗುಲದ ಬಳಿ ವೇದಿಕೆಗಳು ಸೇರಿದಂತೆ ಧ್ವನಿ ಮತ್ತು ಬೆಳಕು ಒಂದು ವೇದಿಕೆ ಸೇರಿದಂತೆ ಒಟ್ಟು 5 ವೇದಿಕೆಗಳ ನಿರ್ಮಾಣಕ್ಕೆ ಪ್ಲಾನ್ ಮಾಡಲಾಗಿದೆ.