ಬಳ್ಳಾರಿ: ನಗರದ ತಾಳೂರು ರಸ್ತೆಯಲ್ಲಿರುವ ನೂತನ ನ್ಯಾಯಾಲಯ ಸಂಕಿರ್ಣದಲ್ಲಿರುವ ಬಾರ್ ಅಸೋಷಿಯೇಷನ್ ಕಟ್ಟಡವನ್ನು ಮುಖ್ಯ ನ್ಯಾಯಮೂರ್ತಿಗಳಾದ ಪ್ರಸನ್ನ ಒರಳಿ ಅವರ ಸಹಯೋಗದೊಂದಿಗೆ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರಿಂದ ಉದ್ಘಾಟನೆ ಮಾಡಲಾಯಿತು. ೨೦೯೧ ಚದುರ ವಿಸ್ತಿರ್ಣದಲ್ಲಿ ಅಚ್ಚುಕಟ್ಟಾಗಿ ನಿರ್ಮಾಣಗೊಂಡಿರುವ ಬಾರ್ ಅಸೋಷಿಯೆಷನ್ ಸಂಕಿರ್ಣವಾಗಿದ್ದು,
೧೮೮೫ ರಲ್ಲಿ ಬಳ್ಳಾರಿಯಲ್ಲಿ ಲಾ ಲೈಬ್ರೇರಿಯನ್ನು ಬ್ರಿಟೀಷ್ ಅಧಿಕಾರಿ ಹೊಲ್ಡಿಂಗ್ ಅವರು ಪ್ರಾರಂಭಿಸುತ್ತಾರೆ. ಅದನ್ನೆ ಮುಂದುವರೆಸಿ ೧೯೨೭ ರಲ್ಲಿ ಬಾರ್ ಅಸೋಷಿಯೆಷನಾಗಿ ಬಳ್ಳಾರಿಯಲ್ಲಿ ಪ್ರಾರಂಭಿಸಲಾಯಿತು. ಹೀಗೆ ಹಲವು ವಿಧ್ಯಮಾನಗಳನ್ನು ಹೊಂದಿರುವ ಬಳ್ಳಾರಿ ವಕೀಲರ ಸಂಘದ ಬಗ್ಗೆ ಜಿಲ್ಲಾಧ್ಯಕ್ಷ ಕೆ.ಎರ್ರಿಗೌಡ ಅವರು ತಿಳಿಸಿದರು.