ಬೆಳಗಾವಿ:- ಇಲ್ಲಿನ ಮಹಾನಗರ ಪಾಲಿಕೆಯ ಬಿಜೆಪಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದುಗೊಳಿಸಿದ್ದ ಪ್ರಕರಣಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೀಗಾಗಿ ಬಿಜೆಪಿ ಇಬ್ಬರು ಪಾಲಿಕೆ ಸದಸ್ಯರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ. ಮೇಯರ್- ಉಪಮೇಯರ್ ಚುನಾವಣೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಕೋರ್ಟ್ ಅವಕಾಶ ನೀಡಿದ್ದರಿಂದ ಇಬ್ಬರೂ ಸದಸ್ಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಕೆಂಪು ಬಣ್ಣದ ಟೆಸ್ಲಾ ಕಾರು ಖರೀದಿಸಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್!
ಮೇಯರ್ ಚುನಾವಣೆಯಲ್ಲಿ ಸ್ಪರ್ಧಿಸಲು, ಮತದಾನ ಮಾಡಲು ಹೈಕೋರ್ಟ್ ನಿಂದ ಅನುಮತಿ ಸಿಕ್ಕಿದ್ದು, ಬಿಜೆಪಿ ಸದಸ್ಯರಾದ ಮಂಗೇಶ್ ಪವಾರ್, ಜಯಂತ್ ಜಾಧವ್ ಸದಸ್ಯತ್ವ ರದ್ದಿಗೆ ತಡೆ ನೀಡಿದೆ. ಬೆಂಗಳೂರು ಹೈಕೋರ್ಟ್ ನಿಂದ ತಡೆ ನೀಡಲಾಗಿದ್ದು, ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಿದೆ.
ಪತ್ನಿಯರ ಹೆಸರಿನಲ್ಲಿ ಮಳಿಗೆ ಪಡೆದಿದ್ದಕ್ಕೆ ಇಬ್ಬರು ಬಿಜೆಪಿ ಸದಸ್ಯರ ಸದಸ್ಯತ್ವ ರದ್ದಾಗಿತ್ತು. ಸುಜೀತ್ ಮುಳಗುಂದ ಎಂಬಾತರಿಂದ ಬಿಜೆಪಿ ಸದಸ್ಯರ ಸದಸ್ಯತ್ವ ರದ್ದು ಮಾಡುವಂತೆ ದೂರು ನೀಡಿದ್ರು. ದೂರಿನ ವಿಚಾರಣೆ ನಡೆಸಿದ ಬೆಳಗಾವಿ ಪ್ರಾದೇಶಿಕ ಆಯುಕ್ತರು ಸದಸ್ಯತ್ವ ರದ್ದು ಮಾಡಿ ಆದೇಶಿಸಿದ್ದರು.
ಪ್ರಾದೇಶಿಕ ಆಯುಕ್ತರ ಆದೇಶವನ್ನ ಪ್ರಶ್ನಿಸಿ ಸದಸ್ಯರು, ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದರು. ಅಲ್ಲಿ ಬಿಜೆಪಿ ಸದಸ್ಯರಿಗೆ ಹಿನ್ನಡೆಯಾಗಿತ್ತು. ಸದಸ್ಯತ್ವ ರದ್ದು ಪ್ರಕರಣ ಸರ್ಕಾರದ ಮುಂದೆ ಹೋಗಿತ್ತು. ಸರ್ಕಾರ ಕೂಡಾ ಪ್ರಾದೇಶಿಕ ಆಯುಕ್ತರ ಆದೇಶವನ್ನ ಎತ್ತಿ ಹಿಡದಿತ್ತು. ಸರ್ಕಾರದ ಆದೇಶವನ್ನ ಬೆಂಗಳೂರು ಹೈಕೋರ್ಟ್ ನಲ್ಲಿ ಸದಸ್ಯರು ಪ್ರಶ್ನಿಸಿದ್ದರು. ಸದ್ಯ ಹೈಕೋರ್ಟ್ ತಡೆಯಿಂದ ಬಿಜೆಪಿ ಸದಸ್ಯರಿಗೆ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ.