ಗಂಟಲಿನ ಕ್ಯಾನ್ಸರ್ ಎಂಬುದು ಗಂಟಲಿನ ಮೇಲೆ ಪರಿಣಾಮ ಬೀರುವ ನಿರ್ದಿಷ್ಟ ರೀತಿಯ ಕ್ಯಾನ್ಸರ್ ಅನ್ನು ಉಲ್ಲೇಖಿಸುವ ಪದವಾಗಿದೆ.
ಗಂಟಲಿನ ಕ್ಯಾನ್ಸರ್ ಎಂದರೆ ಗಂಟಲಿನ ಯಾವುದೇ ಭಾಗದಲ್ಲಿ ಬೆಳೆಯುವ ಗೆಡ್ಡೆಗಳು. ಅವು ಟಾನ್ಸಿಲ್ಗಳು, ನಾಲಿಗೆಯ ಬುಡ ಅಥವಾ ಧ್ವನಿಪೆಟ್ಟಿಗೆಯನ್ನು ಒಳಗೊಂಡಂತೆ ಈ ಪ್ರದೇಶದ ಯಾವುದೇ ಭಾಗದ ಮೇಲೆ ಪರಿಣಾಮ ಬೀರಬಹುದು.
ವಿಶ್ವಾದ್ಯಂತ ಕ್ಯಾನ್ಸರ್ ಸಂಬಂಧಿತ ಸಾವಿನ ಪ್ರಕರಣಗಳಲ್ಲಿ ಗಂಟಲಿನ ಕ್ಯಾನ್ಸರ್ ಆರನೇ ಸ್ಥಾನದಲ್ಲಿದೆ. ಈಗಂತೂ ಈ ರೋಗ ಎಲ್ಲರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರತಿ ವರ್ಷ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಗಂಭೀರವಾಗಿ ಹೆಚ್ಚಾಗುತ್ತಿದೆ.
ಮಹಿಳೆಯರಿಗಿಂತ ಪುರುಷರಲ್ಲಿ ಗಂಟಲು ಕ್ಯಾನ್ಸರ್ ಹೆಚ್ಚಾಗಿ ಕಂಡು ಬರುತ್ತದೆ. ಈ ಕ್ಯಾನ್ಸರ್ಗೆ ಪ್ರಮುಖ ಕಾರಣವೆಂದರೆ ಧೂಮಪಾನ, ಮಾದಕ ದ್ರವ್ಯ ಸೇವನೆ, ಅಧಿಕ ತೂಕ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಗ್ಯಾಸ್ಟ್ರೋಸೊಫೇಜಿಯಲ್ ರಿಫ್ಲಕ್ಸ್ ಕಾಯಿಲೆ (ಆಸಿಡ್ ರಿಫ್ಲಕ್ಸ್). ಈ ಕ್ಯಾನ್ಸರ್ ಅನ್ನನಾಳದ ಯಾವುದೇ ಭಾಗದಲ್ಲಿ ಬೇಕಾದರೂ ಬೆಳೆಯಬಹುದು.
ಕ್ಯಾನ್ಸರ್ ಒಂದು ಮಾರಕ ಕಾಯಿಲೆ ಎಂದು ಹಲವರು ಭಯಪಡುತ್ತಾರೆ. ಆದರೆ, ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಿ ಸರಿಯಾದ ಸಮಯಕ್ಕೆ ಚಿಕಿತ್ಸೆ ಪಡೆದುಕೊಂಡರೆ, ಈ ರೋಗವನ್ನು ಆರಾಮವಾಗಿ ಗುಣಪಡಿಸಬಹುದು. ಅದೇ ರೀತಿ ಗಂಟಲು ಕ್ಯಾನ್ಸರ್ ಸಹ ಗುಣಪಡಿಸಬಹುದು.
ಗಂಟಲು ಕ್ಯಾನ್ಸರ್ ಬರುವುದೇ ನೀವು ಅತಿಯಾಗಿ ಸಿಗರೇಟ್ ಸೇವೆನೆ, ಮದ್ಯಪಾನ, ತಂಬಾಕು ಮತ್ತು ಗುಟ್ಕಾ. ಈ ರೋಗದ ಲಕ್ಷಣಗಳನ್ನು ಮೊದಲೇ ಪತ್ತೆ ಹಚ್ಚಿದರೆ, ಜೀವಕ್ಕೆ ಉಂಟಾಗುವ ಅಪಾಯವನ್ನು ತಡೆಗಟ್ಟಬಹುದು. ಸಾಮಾನ್ಯವಾಗಿ, ನಾವು ಗಂಟಲು ನೋವು ಮತ್ತು ಊತದಂತಹ ಸಮಸ್ಯೆಗಳನ್ನು ನೆಗಡಿಯೆಂದು ನಿರ್ಲಕ್ಷಿಸುತ್ತೇವೆ. ಆದರೆ ಈ ರೀತಿಯ ಸಮಸ್ಯೆಗಳು ಕೆಲವೊಮ್ಮೆ ಗಂಟಲು ಕ್ಯಾನ್ಸರ್ನ ಲಕ್ಷಣವು ಆಗಿರಬಹುದು.
ಗಂಟಲು ಕ್ಯಾನ್ಸರ್ನ ಪ್ರಮುಖ ಲಕ್ಷಣಗಳೆಂದರೆ ಮೂಗಿನ ದಟ್ಟಣೆ, ಕಿವಿ ನೋವು, ಕುತ್ತಿಗೆಯಲ್ಲಿ ಊತ, ಆಹಾರವನ್ನು ನುಂಗಲು ಕಷ್ಟ, ಗಂಟಲಿನಲ್ಲಿ ಭಾರವಾದ ಭಾವನೆ ಮತ್ತು ತೂಕ ಇಳಿಕೆ. ಈ ಲಕ್ಷಣಗಳು ಒಂದು ವಾರದೊಳಗೆ ಕಡಿಮೆಯಾಗದಿದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ.
ಶೀತದ ಸಮಯದಲ್ಲಿ ಗಂಟಲು ನೋವು ಅಥವಾ ಒರಟಾಗುವುದು ಸಾಮಾನ್ಯ. ಆದರೆ ಈ ಲಕ್ಷಣವು ಯಾವುದೇ ಸ್ಪಷ್ಟ ಕಾರಣವಿಲ್ಲದೇ ಕಂಡು ಬಂದರೆ ಅಥವಾ ದೀರ್ಘಕಾಲದವರೆಗೆ ಮುಂದುವರಿದರೆ ಇದು ಗಂಟಲು ಕ್ಯಾನ್ಸರ್ನ ಲಕ್ಷಣವಾಗಿರಬಹುದು.
ನಿಮಗೆ ಗಂಟಲು ಅಥವಾ ಬಾಯಿ ಕ್ಯಾನ್ಸರ್ ಇದ್ದರೆ, ಅದು ನಿಮ್ಮ ಹಲ್ಲುಗಳನ್ನು ಸಡಿಲಗೊಳಿಸಬಹುದು. ಆದ್ದರಿಂದ, ಈ ಸಮಸ್ಯೆಗಳನ್ನು ಹಗುರವಾಗಿ ಪರಿಗಣಿಸದೇ, ಸಮಯಕ್ಕೆ ಸರಿಯಾಗಿ ವೈದ್ಯಕೀಯ ತಪಾಸಣೆ ಒಳಗಾಗಬೇಕು. ಈ ಮೂಲಕ ಗಂಟಲು ಕ್ಯಾನ್ಸರ್ ಅನ್ನು ಮೊದಲೇ ಪತ್ತೆ ಹಚ್ಚಬಹುದು ಮತ್ತು ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಬಹುದು.
ಅಲ್ಲದೇ ಕೆಲ ಕೆಲಸಗಳನ್ನು ಮಾಡುವ ಮೂಲಕ ಗಂಟಲಿನ ಕ್ಯಾನ್ಸರ್ ಅನ್ನು ತಡೆಗಟ್ಟಬಹುದು. ಅಂದರೆ ಹೆಚ್ಚು ನೀರು ಸೇವಿಸಿ. ಇದು ಧ್ವನಿಪೆಟ್ಟಿಗೆಯನ್ನು ತೇವದಿಂದ ಕೂಡಿರುವಂತೆ ಮಾಡುತ್ತದೆ. ತಂಬಾಕು, ನಿಕೋಟಿನ್, ಸಿಗರೇಟ್, ಬೀಡಿ, ರೋಲ್ಸ್ ಮತ್ತು ಅಗೆಯುವ ತಂಬಾಕಿನಿಂದ ದೂರವಿರಿ.