ಬೆಂಗಳೂರು: ಸಾಮಾನ್ಯವಾಗಿ ಮಳೆ ಬಂದಾಗ ಮರದ ಕೆಳಗೇನೋ ಅಥವಾ ಬಸ್ ನಿಲ್ದಾಣದಲ್ಲೊ ನಿಂತುಕೊಳ್ಳೋದು ಸಹಜ. ಆದ್ರೆ ನೀವೇನಾದ್ರೂ ಜಾಹೀರಾತು ಫಲಕದ ಕೆಳಗೆ ದೊಡ್ಡ ದೊಡ್ಡ ಹೋರ್ಡಿಂಗ್ಸ್ ಕೆಳಗೆ ನಿಲ್ಲೋ ಮುನ್ನ ಉಷಾರಾಗಿರಿ. ಅದ್ಯಾಕೆ ಅಂತಿರಾ ಈ ಸ್ಟೋರಿ ನೋಡಿ. ಎಸ್.. ನೋಡೋಕೆ ಕಲರ್ ಫುಲ್ ಆಗಿ, ಅಟ್ರಾಕ್ಟ್ ಆಗಿ ಕಾಣಿಸೋ ಈ ಹೋರ್ಡಿಂಗ್ಸ್ ಜೀವ ತೆಗೆಯೋಕೆ ಕಾದು ಕುಳಿತಿವೆ.
ಹೌದು.. ಕಳೆದ ಒಂದು ದಿನದ ಹಿಂದೆ ಬಿರುಗಾಳಿ ಸಹಿತ ಮಳೆಯ ಅವಾಂತರಕ್ಕೆ ಮುಂಬೈನ ಘಾಟ್ಕೋಪರ್ ದಲ್ಲಿ ಪೆಟ್ರೋಲ್ ಬಂಕ್ ಮೇಲೆ ದೈತ್ಯ ಜಾಹೀರಾತು ಫಲಕ ಬಿದ್ದು 14ಜನ ಸಾವಿಗಿಡಾಗಿದ್ದಾರೆ. ಅಲ್ಲದೆ 74 ಜನರು ಗಾಯಗೊಂಡಿದ್ದಾರೆ. ಇದೆಲ್ಲಾ ಯಾಕೆ ಹೇಳ್ತಾ ಇದೀವಿ ಗೊತ್ತಾ ಬೆಂಗಳೂರಿನಲ್ಲೂ ಈ ಘಟನೆ ಸಂಭವಿಸೋದ್ರಲ್ಲಿ ನೋ ಡೌಟ್. ರಾಜಾಧಾನಿ ಬೆಂಗಳೂರಿನಲ್ಲಿ ಸಾಕಷ್ಟು ಹೋರ್ಡಿಂಗ್ಸ್ ತುಕ್ಕು ಹಿಡಿದಿವೆ. ಯಾವಾಗ ಬೇಕಾದರೂ ಬೀಳುವ ಸಾಧ್ಯತೆ ಇದ್ದು,
ಸಿಟಿ ಮಂದಿಯನ್ನು ಈಗ ಭಯ ಹುಟ್ಟಿಸಿದೆ. ಏರ್ಪೋರ್ಟ್ ರೋಡ್, ಹೊಸೂರು ರೋಡ್, ಮಾರತಹಳ್ಳಿ, ವೈಟ್ ಫೀಲ್ಡ್, ಆನೇಕಲ್ ಸೇರಿದಂತೆ ಬೆಂಗಳೂರಲ್ಲಿ ಸಾಕಷ್ಟು ಕಡೆಗಳಲ್ಲಿ ಹೋರ್ಡಿಂಗ್ಸ್ ಗಳನ್ನು ಹಾಕಲಾಗಿದೆ. ಹಲವು ಕಡೆ ಅನುಮತಿ ಪಡೆಯದೆ ಅನಧಿಕೃತವಾಗಿ ಅಳವಡಿಸಿದ್ರೆ, ಕೆಲವೊಂದಕ್ಕೆ ಚೂರು ಪಾರು ಅನುಮತಿ ಪಡೆದು ನೂರಾರು ಮೀಟರ್ ಎತ್ತರ ಉದ್ದದಲ್ಲಿ ಅಳವಡಿಕೆ ಮಾಡಲಾಗಿದೆ. ಇದರಿಂದ ಹೋರ್ಡಿಂಗ್ಸ್ ಗಳು ಯಾವಾಗ ಬೇಕಾದರೂ ನೆಲಕ್ಕುರುಳಬಹುದು.ಇನ್ನು ಈ ಬಗ್ಗೆ ಸಾಮಾಜಿಕ ಹೋರಾಟಗಾರ ಅಮರೇಶ್ ಪತ್ರ ಕೂಡ ಬರೆದಿದ್ದಾರೆ.
BMTC Recruitment: ದ್ವಿತೀಯ PUC ಪಾಸಾದವರಿಗೆ BMTCಯಲ್ಲಿ ಬಂಪರ್ ಉದ್ಯೋಗ..! ಈಗಲೇ ಅರ್ಜಿ ಸಲ್ಲಿಸಿ
ಬೆಂಗಳೂರಲ್ಲಿರುವ ಅನಧಿಕೃತ ಮತ್ತು ತುಕ್ಕು ಹಿಡಿದಿರುವ ಹೋರ್ಡಿಂಗ್ಸ್ ಗಳನ್ನು ತೆರವು ಮಾಡಬೇಕೆಂದು ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ದಯಾನಂದ ಅವರಿಗೆ ಪತ್ರ ಬರೆಯಲಾಗಿದೆ. ಕೂಡಲೇ ತೆರವು ಮಾಡಬೇಕು ಇಲ್ಲಾಂದ್ರೆ ಮುಂಬೈ ರೀತಿಯಲ್ಲಿ ಅಮಾಯಕರು ಪ್ರಾಣ ಕಳೆದುಕೊಳ್ಳುಳ್ಳುತ್ತಾರೆ ಎಂದು ಮನವಿ ಮಾಡಿದ್ದಾರೆ. ಒಟ್ಟಾರೆ ಜನರನ್ನ ತುಂಬಾ ಆಕರ್ಷಣೆ ಮಾಡುತ್ತಿದ್ದ ಜಾಹಿರಾತು ಫಲಕಗಳು ಈಗ ಯಮಸ್ವರೂಪಿಯಂತೆ ಜೀವವನ್ನು ತೆಗೆಯಲು ಕಾಯಿತಾ ಇದ್ದಾವೆ, ಹಾಗಾಗಿ ರಸ್ತೆ ಯಲ್ಲಿ ಹೋಗುವವಗ ಜಾಗರೂಕರಾಗಿರಿ..