ಬೆಂಗಳೂರು: ಬಿಡಿಎ ನಡೆದಿರೋ ಬದಲಿ ನಿವೇಶನ ಅಕ್ರಮ ಬಗೆದಷ್ಟೂ ಬಯಲಾಗ್ತಿದೆ.ನಿವೇಶನ ಹಂಚಿಕೆ ನಿಯನಗಳನ್ನ ಗಾಳಿಗೆ ತೂರಿ, ಪ್ರಾಧಿಕಾರಕ್ಕೆ ಕೋಟಿ ಕೋಟಿ ನಷ್ಟ ಉಂಟು ಮಾಡಿದ್ದಾರೆ. ಈ ಸ್ಕ್ಯಾಮ್ ನ್ನ ಹೇಗೆಲ್ಲಾ ಮಾಡ್ತಾ ಇದ್ರು..? ಯಾರೆಲ್ಲಾ ಭಾಗಿಯಾಗಿದ್ದಾರೆ ಅನ್ನೋ ವಿಚಾರವನ್ನ ನ್ಯಾಯಮೂರ್ತಿ ಚಂದ್ರಶೇಖರ್ ನೇತೃತ್ವದ ಸಮಿತಿ ಬಯಲಿಗೆ ಎಳೆದಿದೆ. ಅಷ್ಟೇ ಅಲ್ಲದೇ ಬಿಡಿಎದಲ್ಲಿ ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ, ಕಾರ್ಯದರ್ಶಿ, ಉಪಕಾರ್ಯದರ್ಶಿ, ಹಾಗೂ ಹಿಂದಿನ ಬಿಡಿಎ ಆಯುಕ್ತರು ನಡೆಸಿರೋ ಗೋಲ್ ಮಾಲ್ ನ್ನೂ ಹೊರಗೆಡವಿದ್ದಾರೆ.
ಯೆಸ್.. ಬಿಡಿಎ ಬದಲಿ ನಿವೇಶನ ಹಂಚಿಕೆಯಲ್ಲಿ ಭಾರೀ ಗೋಲ್ ಮಾಲ್ ಆಗಿರೋದು ಈಗಲೇ ಸಾಭೀತಾಗಿದೆ. ನಿವೇಶನ ಹಂಚಿಕೆ ನಿಯಮಗಳನ್ನ ಗಾಳಿಗೆ ತೂರಿ, ಕೋಟ್ಯಾಂತರ ರೂಪಾಯಿ ಮೌಲ್ಯದ ನಿವೇಶನಗಳನ್ನ ಪ್ರಭಾವಿಗಳು, ರಾಜಕಾರಣಿಗಳಿಗೆ ಹಂಚಿಕೆ ಮಾಡಿರೋದು ಗೊತ್ತಾಗಿದೆ. ಅಭಿವೃದ್ಧಿ ಹೊಂದಿದ ಲೇಔಟ್ ಗಳಲ್ಲಿ ಹರಾಜಾಗದೇ ಉಳಿದಿದ್ದ ಸೈಟ್ ಗಳನ್ನ ಹರಾಜಿನ ಮೂಲಜವೇ ಮಾರಾಟ ಮಾಡಬೇಕು. ಹೀಗಂತ ಸುಪ್ರೀಂ ಕೋರ್ಟ್ ಆದೇಶ ಕೂಡ ಇದೆ. ಇದ್ಯಾವುದನ್ನೂ ಲೆಕ್ಕಿಸದೇ ಬೇಕಾಬಿಟ್ಟಿ ಬದಲಿ ನಿವೇಶನ ನೀಡಿರೋ ಪ್ರಕರಣಗಳು ಬಯಲಾಗಿವೆ.

Gruhajyothi Scheme: ಗೃಹ ಜ್ಯೋತಿ : ನೋಂದಣಿಗೆ ಹಣ ವಸೂಲಿ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ
ಈ ಸಂಬಂಧ ನ್ಯಾಯಮೂರ್ತಿ ಎ.ವಿ ಚಂದ್ರಶೇಖರ್ ನೇತೃತ್ವದ ಸಮಿತಿ ವರದಿ ತಯಾರಿ ಮಾಡಿದ್ದು,ಸುಪ್ರೀಂಕೋರ್ಟ್ ಗೆ ಸಲ್ಲಿಸಿದೆ. ಈ ಹಿಂದೆ ಗೃಹ ಸಚಿವ ಆರಗ ಜ್ಞಾನೇಂದ್ರ ಸೇರಿ ನಾಲ್ವರಿಗೆ ನಿಯಮಬಾಹಿರವಾಗಿ ಸೈಟ್ ಹಂಚಿಕೆ ಮಾಡಿ, ಸುಪ್ರೀಂಕೋರ್ಟ್ ನಿಂದ ಚೀಮಾರಿ ಹಾಕಿಸಿಕೊಂಡು ವರ್ಗಾವಣೆಯಾಗಿದ್ದ, ಹಿಂದಿನ ಆಯುಕ್ತ ರಾಜೇಶ್ ಗೌಡ ಅಕ್ರಮದಲ್ಲಿ ಭಾಗಿಯಾಗಿದ್ದಾರೆಂದು ವರದಿಯಲ್ಲಿ ಉಲ್ಲೇಖ ಆಗಿದೆ. ಹೀಗಾಗಿ ರಾಜೇಶ್ ಗೌಡ ಸೇರಿದಂತೆ ಹಿಂದಿನ ಬಿಡಿಎ ಕಾರ್ಯದರ್ಶಿ ಸಿ.ಎಲ್ ಆನಂದ್, ಉಪ ಕಾರ್ಯದರ್ಶಿ ಎನ್ ಎನ್ ಮಧು ಅವ್ರಿಗೂ ಮತ್ತೆ ಸಂಕಷ್ಟ ಎದುರಾಗಿದೆ.
ಇನ್ನು ನ್ಯಾಯಾಲಯಗಳ ಊರ್ಜಿತವಲ್ಲದ ಆದೇಶಗಳನ್ನ ಇಟ್ಟಿಕೊಂಡು ಗೋಲ್ ಮಾಡಿದ್ದಾರೆ. ಫಲಾನುಭವಿಗಳಿಂದ ಭೋಗ್ಯ, ಕ್ರಮ ಪತ್ರ ಮಾಡಿಸಿಕೊಂಡ ಮೇಲೂ ಬದಲಿ ನಿವೇಶಕ್ಕೆ ಅರ್ಜಿ ಹಾಕಿ, ದುಬಾರಿ ಬೆಲೆಯ ಸೈಟ್ ಗಳನ್ನ ಪಡೆದುಕೊಂಡಿರೋ ಬಗ್ಗೆಯೂ ವರದಿಯಲ್ಲಿ ಹೇಳಲಾಗಿದೆ. ಸಮಿತಿ ವಿಚಾರಣೆ ನಡೆಸಿ,ಸುಪ್ರೀಂಕೋರ್ಟ್ ಗೆ ವರದಿ ಸಲ್ಲಿಸಿದೆ. ಪ್ರಭಾವಿ ರಾಜಕಾರಣಿಗಳೂ ಬದಲಿ ಸೈಟ್ ಪಡೆದುಕೊಂಡಿರೋ ಬಗ್ಗೆ ವರದಿಯಲ್ಲಿ ಉಲ್ಲೇಖ ಆಗಿದೆ. 2021 ಅಕ್ಟೋಬರ್ ನಂತರ ಸುಮಾತು 90 ಕ್ಕೂ ಹೆಚ್ಚು ಬದಲಿ ನಿವೇಶನಗಳನ್ನ ಬಿಡಿಎ ಹಂಚಿಕೆ ಮಾಡಿತ್ತು. ಈ ಪೈಕಿ ಅರ್ಕಾವತಿ ಬಡಾವಣೆ ಹಾಗೂ ಕೆಂಪೇಗೌಡ ಲೇಔಟ್ ನಲ್ಲಿನ ಹಲವು ಸೈಟ್ ಗಳ ಹಂಚಿಕೆಯನ್ನೇ ಮರೆಮಾಚಲಾಗಿದೆ ಅನ್ನೋ ಸ್ಪೋಟಕ ವಿಚಾರಗಳೂ ಬಯಲಾಗಿದೆ. ಇದಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ದೊಡ್ಡ ಮಟ್ಟದಲ್ಲಿ ಆರ್ಥಿಕ ನಷ್ಟ ಉಂಟಾಗಿದೆ..
ಒಟ್ನಲ್ಲಿ ಪ್ರಾಧಿಕಾರದ ಬೊಕ್ಕಸಕ್ಕೆ ಕನ್ನ ಹಾಕಿರೋ ಅಧಿಕಾರಿಗಳ ವಿರುದ್ಧ ಶೀಘ್ರದಲ್ಲೇ ಕ್ರಮ ಆಗಲಿದೆ. ಬಿಡಿಎದಲ್ಲಿ ಠಿಕಾಣಿ ಹಾಕಿ ಕೋಟಿ ಕೋಟಿ ಲೂಟಿ ಮಾಡ್ತಿದ್ದ ಭ್ರಷ್ಟರನ್ನ ನ್ಯಾಯಮೂರ್ತಿ ಚಂದ್ರಶೇಖರ್ ಸಮಿತಿ ಬೆತ್ತಲೆಗೊಳಿಸಿರೋದು ಶ್ಲಾಘನೀಯ.. ಈ ರೀತಿ ಇನ್ನಷ್ಟು ಅಕ್ರಮ ನಡೆಸಿರೋ ಕುಳಗಳು ಬಿಡಿಎದಲ್ಲಿ ಬೇರೂರಿದ್ದಾರೆ.. ಅವ್ರ ವಿರುದ್ಧವೂ ತನಿಖೆಗೆ ಆಗಬೇಕಿದೆ
