ಬೆಂಗಳೂರು: ನೌಕರರ ವೇತನ ಪಾವತಿ ಹೆಸರಲ್ಲಿ ಬಿಬಿಎಂಪಿ 60 ಕೋಟಿ ಹಗರಣ ಮಾಡಿದೆ ಎಂದು ಆಮ್ ಆದ್ಮಿ ಪಕ್ಷ ಗಂಭೀರ ಆರೋಪ ಮಾಡಿದೆ. ಈ ಸಂಬಂಧ ಬೆಂಗಳೂರಿನಲ್ಲಿ ಸುದ್ದಿಗೋಷ್ಟಿ ನಡೆಸಿ ಶರತ್ ಖಾದ್ರಿ ಮಾತನಾಡಿ, ಅಂದಿನ ಗ್ರಾಮ ಪಂಚಾಯಿತಿಗಳ ದಿನಗೂಲಿ ಕಾರ್ಮಿಕರನ್ನು ಬಿಬಿಎಂಪಿ ಗೆ ವಿಲೀನ ಗೊಳಿಸಲಾಗಿತ್ತು. ದಿನಗೂಲಿ ಕಾರ್ಮಿಕರು ವೇತನ ಹೆಚ್ಚಳಕ್ಕಾಗಿ ನ್ಯಾಯಾಲಯದ ಮೊರೆ ಹೋಗಿದ್ದು,
ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಹೈಕೋರ್ಟ್ ಸೂಚಿಸಿತ್ತು. 2007 ರಿಂದ ದಿನಗೂಲಿಗಾರರ ವೇತನವನ್ನು ಹೆಚ್ಚಿಸ ಲಾಗಿತ್ತು. ಅಲ್ಲದೇ 15 ಸಾವಿರ ಪೌರಕಾರ್ಮಿಕರಿಗೆ ಕಳೆದ 3 ತಿಂಗಳಿಂದ ಸಂಬಳ ನೀಡಲು ಸಾಧ್ಯವಾಗಿಲ್ಲ ಮತ್ತೊಂದೆಡೆ ಬಿಬಿಎಂಪಿಯು 534 ನೌಕರರಿಗೆ ಅನಗತ್ಯ ಬಾಕಿ ಪಾವತಿಸಲು ಮುಂದಾಗಿದೆ. ಈ ಬಾಕಿ ಪಾವತಿ ಕೇವಲ ಬಿಬಿಎಂಪಿಯಿಂದ ಹಣ ಲೂಟಿ ಮಾಡುವ ಬಿಜೆಪಿ ಸರ್ಕಾರದ ವಂಚನೆಯ ಯೋಜನೆ ಆಗಿದೆ ಎಂದು ಶರತ್ ಖಾದ್ರಿ ಆರೋಪಿಸಿದ್ದಾರೆ.
