ಬೆಂಗಳೂರು:- BBMP ನರ್ಸರಿ ಶಾಲಾ ಕಟ್ಟಡ ಕುಸಿತದ ಬಗ್ಗೆ ಮಧು ಬಂಗಾರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ಗುತ್ತಿಗೆದಾರರ ವಿರುದ್ಧ ಕಾನೂನು ಅಡಿಯಲ್ಲಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಹೇಳಿದ ಮಧು ಬಂಗಾರಪ್ಪ, ಯಾವ ರೀತಿಯಲ್ಲಿ ಕಟ್ಟಡ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸಂಪೂರ್ಣ ಮಾಹಿತಿ ತೆಗೆದುಕೊಳ್ಳುತ್ತೇನೆ ಎಂದರು.
ಯಾರಿಗಾದರೂ ಅನಾಹುತವಾದಾಗ ಪರಿಹಾರ ನೀಡುತ್ತೇವೆ, ಇದುವೇ ಪರಿಹಾರ ಅಲ್ಲ. ಇಂತಹ ಸಂದರ್ಭ ಮರುಕಳಿಸದಂತೆ ನೋಡಿ ಕೊಳ್ಳಬೇಕು. ಸಾರ್ವಜನಿಕರ ಯಾವುದೇ ಕಟ್ಟಡವಾಗಲಿ ಜವಾಬ್ದಾರಿ ತೆಗೆದುಕೊಳ್ಳಬೇಕು. ಕಟ್ಟಡಗಳು ಶಿಥಿಲಗೊಂಡಿದ್ದರೆ ಪರ್ಯಾಯ ವ್ಯವಸ್ಥೆ ಮಾಡಬೇಕು. ಮಕ್ಕಳ ಸುರಕ್ಷತೆ ಬಗ್ಗೆ ಮೊದಲು ನೋಡಬೇಕು, ನಂತರ ಶಿಕ್ಷಣ ಎಂದರು.
ಶಾಲಾ ಕಾಲೇಜು ಕಟ್ಟಡಗಳ ನಿರ್ಮಾಣವನ್ನ ಸರ್ಕಾರದಿಂದ ನಿಲ್ಲಿಸಲಾಗಿತ್ತು. ಕಟ್ಟಡ ಕಾಮಗಾರಿಗಳನ್ನ ಹೊಸ ಸರ್ಕಾರ ಬಂದ ತಕ್ಷಣ ನಿಲ್ಲಿಸಲಾಗಿತ್ತು. ಆದರೆ ಇವಾಗ ಹಣ ಬಿಡುಗಡೆ ಮಾಡಲಾಗಿದೆ. ಇವಾಗ ಯಾವುದೇ ಸಮಸ್ಯೆ ಇಲ್ಲ, 8500 ಕಟ್ಟಡಗಳ ಕಾಮಗಾರಿ ಕೆಲಸ ಆರಂಭವಾಗಿದೆ. ಇಂತಹ ಹೇಳಿಕೆಗಳು ವಿರೋಧ ಪಕ್ಷಗಳಿಂದ ಬರುವುದು ಸಹಜ ಎಂದರು.
ಯಾವುದೇ ಕೊರತೆಯಿಲ್ಲ, ಉತ್ತಮ ಯೋಜನೆಯನ್ನು ಕೊಟ್ಟಿದ್ದೇವೆ ಅದಕ್ಕೂ ದುಡ್ಡಿದೆ. ಸರ್ಕಾರ ಬದಲಾವಣೆ ಆದ ಕೂಡಲೇ ಅನುದಾನವನ್ನು ನಿಲ್ಲಿಸಲಾಗಿತ್ತು. ಯಾವ ಕಟ್ಟಡ ಕಾಮಗಾರಿ ಆರಂಭವಾಗಿಲ್ಲವೋ ಅದನ್ನ ತಡೆಹಿಡಿಯಿರಿ. ಕಾಮಗಾರಿ ನಡೆಯುತ್ತಿರುವುದನ್ನ ಮುಂದುವರೆಸಿ ಎಂದು ಸಿದ್ದರಾಮಯ್ಯ ಹೇಳಿದ್ದರು. ಇವಾಗ ಎಲ್ಲಾ ಕಾಮಗಾರಿ ಆರಂಭವಾಗಿದೆ ಎಂದರು.