ಬೆಂಗಳೂರು: ಸಿಲಿಕಾನ್ ಸಿಟಿಯನ್ನ ಕ್ಲೀನ್ ಸಿಟಿ ಮಾಡಲು ಬಿಬಿಎಂಪಿ ಮಾಸ್ಟರ್ ಪ್ಲಾನ್ ಮಾಡಿದ್ದು ಇನ್ಮುಂದೆ ಡೆಬ್ರಿಸ್ ಕ್ಲೀನ್ ಮಾಡದ ಗುತ್ತಿಗೆದಾರರ ವಿರುದ್ದ ಕ್ರಮಕ್ಕೆ ಮುಂದಾದ ಪಾಲಿಕೆ
ಹೌದು.. ಡೆಬ್ರಿಸ್ ಕ್ಲೀನ್ ಮಾಡಲು ತಗಲುವ ವೆಚ್ಚವನ್ನ ಗುತ್ತಿಗೆದಾರರ ಬಿಲ್ಲುಗಳಲ್ಲಿ ಕಡಿತಗೊಳಿಸಲು ಮುಂದಾದ ಬಿಬಿಎಂಪಿ ಇನ್ಮುಂದೆ ಡೆಬ್ರಿಸ್ ಕ್ಲೀನ್ ಮಾಡದೇ ಇದ್ರೆ ದುಪ್ಪಟ್ಟು ದಂಡ ಹಾಕಲು ಮುಂದಾದ ಬಿಬಿಎಂಪಿಡೆಬ್ರಿಸ್ ಕ್ಲೀನ್ ಮಾಡಲು ತಗುಲಿದ ವೆಚ್ಚಕ್ಕಿಂತ 1.5. ಪಟ್ಟು ಹೆಚ್ಚು ಹಣವನ್ನ ಬಿಲ್ಲುಗಳಲ್ಲಿ ಕಡಿತಗೊಳಿಸಲು ಫ್ಲಾನ್ ಈ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಆದೇಶ ಹೊರಡಿಸಿದ್ದಾರೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 714 ಕಿ.ಮೀವರೆಗೆ ವ್ಯಾಪಿಸಿದೆ ಈ ವ್ಯಾಪ್ತಿಯಲ್ಲಿ ರಸ್ತೆ ಮೂಲಭೂತ ಸೌಕರ್ಯ, ಯೋಜನೆ, ಬೃಹತ್ ನೀರುಗಾಲುವೆ ಹಾಗೂ ಕೆರೆಗಳು ಸೇರಿದಂತೆ ಸಿವಿಲ್ ಕಾಮಗಾರಿ ಮಾಡಲಾಗುತ್ತೆ ಕಾಮಗಾರಿಗಳು ಮುಕ್ತಾಯಗೊಂಡ ನಂತ್ರ ಡೆಬ್ರಿಸ್ ಗಳನ್ನ ಬಿಟ್ಟು ಹೋಗ್ತಿರುವ ಗುತ್ತಿಗೆದಾರರು ಇದ್ರಿಂದ ಬಿಬಿಎಂಪಿಗೆ ಆರ್ಥಿಕ ನಷ್ಟ ಡೆಬ್ರಿಸ್ ಗಳ ನಿವಾರಣೆ ಮತ್ತು ನಿರ್ಮೂಲನೆಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಆದೇಶ ಹೊರಡಿಸಿದ ಪಾಲಿಕೆ
ಆದೇಶದಲ್ಲಿ ಏನಿದೆ?
1. ಪಾಲಿಕೆ ಕಾಮಗಾರಿಗಳಿಂದ ಸೃಜನವಾಗುವ ಡೆಬ್ರಿಗಳನ್ನ ಆಯಾ ಗುತ್ತಿಗೆದಾರರಿಂದ ತೆರವುಗೊಳಿಸಬೇಕು
* ಇದರ ಉಸ್ತುವಾರಿಯನ್ನ ಸಂಬಂಧಿಸಿದ ಅಧಿಕಾರಿಯು ನಿರಂತರವಾಗಿ ವಹಿಸಬೇಕು.
2. ಕಾಮಗಾರಿ ಮುಗಿದ ನಂತ್ರ ಯಾವುದೇ ತರಹದ ಡೆಬ್ರಿಗಳನ್ನ ಸೃಜಿಸದಂತೆ ಗುತ್ತಿಗೆದಾರರಿಗೆ ಸೂಚಿಸುವುದು.
3. ಕಾಮಗಾರಿ ಮುಗಿದ ನಂತ್ರ ಡೆಬ್ರಿಸ್ ಸೃಜಿಸಿ ತೆರವುಗೊಳಿಸದೇ ಇದ್ರೆ ಪಾಲಿಕೆ ತೆರವುಗೊಳಿಸಬೇಕು.
* ನಂತ್ರ ಅಂತಿಮ ಬಿಲ್ಲುಗಳಲ್ಲಿ ಡೆಬ್ರಿಸ್ ಕ್ಲೀನ್ ಗೆ ತಗುಲಿದ ವೆಚ್ಚಗಳ 1.5 ಪಟ್ಟು(ಶೇ.150 ರಷ್ಟು)ಕಡಿತಗೊಳಿಸುವುದು.