ಬೆಂಗಳೂರು :ಬೆಂಗಳೂರು ಅಪಾರ್ಟ್ಮೆಂಟ್ಸ್, ಹಾಸ್ಟೆಲ್ಗಳು ಹಾಗೂ ಪಿಜಿಗಳಿಗೆ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ನಗರದ ಎಲ್ಲಾ ಅಪಾರ್ಟ್ಮೆಂಟ್ಗಳಲ್ಲಿ ಟೆಂಪರೇಚರ್ ಚೆಕ್ ಮಾಡುವುದನ್ನು ಕಡ್ಡಾಯ ಮಾಡಲಾಗಿದೆ. ಅಪಾರ್ಟ್ಮೆಂಟ್ ನ ಜಿಮ್, ಸ್ವಿಮ್ಮಿಂಗ್ ಪೂಲ್, ಕ್ರೀಡಾಂಗಣ ಬಂದ್ ಮಾಡುವುದು. ಲಿಫ್ಟ್ ಗಳಲ್ಲಿನ ಬಟನ್ಗಳನ್ನು ಬಳಕೆಗೆ ತಕ್ಕಂತೆ ಸ್ಯಾನಿಟೈಸ್ ಫ್ಲಾಟ್ ಒಂದರಲ್ಲಿ ಮೂರಕ್ಕಿಂತ ಹೆಚ್ಚಿನ ಪ್ರಕರಣಗಳು ಪತ್ತೆಯಾದರೆ,
ಇಡೀ ಮಹಡಿ ಸೀಲ್ಡೌನ್. ಹೊರಗಿನಿಂದ ಬರುವವರಿಗೆ ಸ್ಯಾನಿಟೈಸ್, ಮಾಸ್ಕ್ ಕಡ್ಡಾಯ ಮಾಡುವಂತೆ ಆದೇಶಿಸಿದೆ. ಜೊತೆಗೆ ಇಡೀ ಅಪಾರ್ಟ್ ಮೆಂಟ್ ಅನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡುವಂತೆ ಸೂಚಿಸಲಾಗಿದೆ. ಬೆಂಗಳೂರಲ್ಲಿ ಕೋವಿಡ್ ಅಬ್ಬರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಈ ಹಿನ್ನೆಲೆ ಕೊರೊನಾ ಹರಡುವಿಕೆ ತಡೆಗಟ್ಟಲು ಬಿಬಿಎಂಪಿ ಮುಂದಾಗಿದೆ.
