ಬೆಂಗಳೂರು: ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿನ ಸಂಬಂಧ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದ್ದರೂ ಪಾಲಿಕೆ ಸಿಬ್ಬಂದಿ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹೀಗಾಗಲೇ ಬೆಂಗಳೂರಿನಲ್ಲಿ ಸದ್ದಿಲ್ಲದೇ ಓಮಿಕ್ರಾನ್ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಕೋವಿಡ್ ನಿಯಂತ್ರಣಕ್ಕೆ ಇದ್ದ ಸಹಾಯವಾಣಿ ಇದೀಗ ಯಾವುದೇ ರೆಸ್ಪಾನ್ಸ್ ಇಲ್ಲದೇ ಜನರು ಪರದಾಡುವಂತಾಗಿದೆ. ಕಳೆದ ಬಾರಿ ಕೋವಿಡ್ ಬಂದಾಗ ಜನರಿಗೆ ಆಸ್ಪತ್ರೆ, ಬೆಡ್, ಐಸಿಯು,
ಆಂಬುಲೆನ್ಸ್ ಬಗ್ಗೆ ಮಾಹಿತಿ ಕೊಡುತ್ತಿದ್ದ ಹೆಲ್ಪ್ ಸೆಂಟರ್, ಇದೀಗ ಕಾಲ್ ಮಾಡುದ್ರೆ ತೆಗಿಯೋರು ಇಲ್ಲ, ದಿನದ 24 ಗಂಟೆಯೂ ಹೆಲ್ಪ್ ಲೈನ್ ನಂಬರ್ ಬ್ಯೂಸಿ ಬರುತ್ತಿದ್ದು, ಬಿಬಿಎಂಪಿ ಸೋಂಕಿನ ಸಂಬಂಧ ಹೆಚ್ಚಿನ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಸೋಂಕಿತರ ಚಿಕಿತ್ಸೆ, ಕೋವಿಡ್ ಬಗ್ಗೆ ಮಾಹಿತಿ, ಬೆಡ್, ಐಸಿಯು, ಆಂಬುಲೆನ್ಸ್ ಸೇರಿದಂತೆ ಇತರೆ ಮಾಹಿತಿ ಒಳಗೊಂಡ 1533 ಹೆಲ್ಪ್ ಲೈನ್ ಸಂಖ್ಯೆ ಇದೀಗ ರೆಸ್ಪಾನ್ಸ್ ಮಾಡದೇ ಹೆಚ್ಚಿನ ಅಸಡ್ಡೆ ವಹಿಸುತ್ತಿದೆ ಎಂದು ಹೇಳಲಾಗಿದೆ.
