ಬೆಂಗಳೂರು: ಓಮಿಕ್ರಾನ್ ಸೋಂಕಿನ ಸಂಬಂಧ ಕೇಂದ್ರ ಸರ್ಕಾರ ಸೂಚನೆ ನೀಡಿದ ಬೆನ್ನಲ್ಲೇ ಬಿಬಿಎಂಪಿ ಫುಲ್ ಅಲರ್ಟ್ ಆಗಿದೆ. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸುತ್ತಮುತ್ತ ಪಾಲಿಕೆ ಕಣ್ಗಾವಲು ಇಟ್ಟಿದ್ದು, ದೇವನಹಳ್ಳಿ, ಏರ್ಪೋರ್ಟ್ ಸುತ್ತ ಇರುವ ಹೋಟೆಲ್, ಲಾಡ್ಜ್, ರೆಸಾರ್ಟ್ ಗಳ ಮಾಹಿತಿ ಕಲೆಹಾಕಲು ಪಾಲಿಕೆ ನಿರ್ಧಾರ ಮಾಡಿದೆ.
ಅಕಸ್ಮಾತ್ ಕೇಸ್ ಹೆಚ್ಚಳವಾದರೆ ನಗರದ ಬದಲು ಏರ್ಪೋರ್ಟ್ ಸುತ್ತಮುತ್ತಲೇ ಸೋಂಕಿತರ ಕ್ವಾರಂಟೈನ್ ಮಾಡಲು ಬಿಬಿಎಂಪಿ ಮುಂದಾಗಿದೆ ಎಂದು ಹೇಳಲಾಗಿದೆ. ಒಮಿಕ್ರಾನ್ ಬಗ್ಗೆ ಆತಂಕ ವ್ಯಕ್ತಪಡಿಸಿ ರಾಷ್ಟ್ರೀಯ ಆರೋಗ್ಯಾಧಿಕಾರಿ ಎಲ್ಲಾ ರಾಜ್ಯಗಳಿಗೆ ಪತ್ರ ಬರೆದು,ಸ್ಥಳೀಯ ಮಟ್ಟದಿಂದ ಕಾರ್ಯೋನ್ಮುಖ ರಾಗಬೇಕು ಎಂದಮೇಲೆ ಬಿಬಿಎಂಪಿ ಈ ಪರಿಹಾರ ಕಂಡುಕೊಂಡಿದೆ.
