ಬೆಂಗಳೂರು ನಗರದ 10 ವಾರ್ಡ್ ಗಳಲ್ಲಿ ಸೋಂಕು ಉಲ್ಬಣಗೊಂಡಿದ್ದು, ಆ ವಾರ್ಡ್ ಗಳಲ್ಲಿ ಬಿಬಿಎಂಪಿ ಹೆಚ್ಚಿನ ನಿಗಾ ವಹಿಸಿದೆ ಎಂದು ಹೇಳಲಾಗಿದೆ. ಬೆಳ್ಳಂದೂರು, ದೊಡ್ಡನಕ್ಕುಂದಿ, ಹಗದೂರು, ಎಚ್‍ಎಸ್‍ಆರ್ ಬಡಾವಣೆ, ವರ್ತೂರು, ಕೋರಮಂಗಲ, ನ್ಯೂ ತಿಪ್ಪಸಂದ್ರ, ಹೊರಮಾವು, ಶಾಂತಲಾ ನಗರ ಹಾಗೂ ಬೇಗೂರು ವಾರ್ಡ್‍ಗಳಲ್ಲಿ ಪ್ರತಿನಿತ್ಯ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದು ಕಂಡು ಬಂದಿದ್ದು, 100ಕ್ಕೂ ಹೆಚ್ಚು ಸೋಂಕಿತರು ಪತ್ತೆಯಾಗಿದ್ದಾರೆ. ಹೀಗಾಗಿ ಡೇಂಜರ್ ಜೋನ್‍ನಲ್ಲಿರುವ ಈ ಹತ್ತು ವಾರ್ಡ್‍ಗಳಲ್ಲಿ ಜನರು ಓಡಾಡಲು ಬಿಬಿಎಂಪಿ ನಿರ್ಬಂಧ ವಿಧಿಸಿದೆ ಎಂದು ಹೇಳಲಾಗಿದೆ.
