ಬಾಗಲಕೋಟೆ: ಎರಡು ನೂರು ವರ್ಷ ಇತಿಹಾಸ ಹೊಂದಿದ ಶ್ರೀ ಗಟಗಿ ಬಸವೇಶ್ವರ ಜಾತ್ರೆ ಮತ್ತು ತೇರು ವಾದ್ಯ ಮೇಳದೊಂದಿಗೆ ನಡೆಯಿತು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಶ್ರೀ ಗಟಗಿ ಬಸವೇಶ್ವರ ದೇವಸ್ಥಾನವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ದೀಪಾವಳಿ ಹಬ್ಬದ ಕೊನೆಯ ಕಡಿಪಡ್ಡೆ ದಿನದಂದು ಬೆಳಿಗ್ಗೆ ಶ್ರೀ ಗಟಗಿ ಬಸವೇಶ್ವರ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ.
ಸಾವಿರಾರು ಮಹಿಳೆಯರಿಗೆ ಉಡಿ ತುಂಬಿ ಮತ್ತು ಭಕ್ತರಿಗೆ ಪ್ರಸಾದ ಅವ್ಯವಸ್ಥೆ ಮಾಡಿದರು.
ಸಂಜೆ ಆರು ಗಂಟೆಗೆ ರಬಕವಿಯ ಪ್ರಮುಖ ರಸ್ತೆಯಲ್ಲಿ ವಾದ್ಯ ಮೇಳ ದೊಂದಿಗೆ ಸಂಭ್ರಮದಿಂದ ತೇರು ಎಳೆಯಿತು.
ಶ್ರೀ ಗಟಗಿ ಬಸವೇಶ್ವರ ದೇವಸ್ಥಾನದ ತೇರು ಎಳೆಯುವ ಸಮಯದಲ್ಲಿ ಸಾವಿರಾರು ಭಕ್ತರು ದೇವರಿಗೆ ಕೈ ಮುಗಿದು ತಮ್ಮ ಹರಕೆಗಳನ್ನು ತೀರಿಸಿಕೊಂಡರು.
ಇದೇ ಸಂದರ್ಭದಲ್ಲಿ ಬಸವರಾಜ ಯಂಡಿಗೇರಿ. ಚಿದಾನಂದ ಸೊಲ್ಲಾಪುರ. ಮಹೇಶ ಬಿಲವಡಿ. ಗಜಾನನ ತೆಗ್ಗಿ. ರಾಜಶೇಖರ್ ಕುರ್ಲಿ ಸೇರಿದಂತೆ ಶ್ರೀ ಕಟಗಿ ಬಸವೇಶ್ವರ ದೇವಸ್ಥಾನ ಟ್ರಸ್ಟಿನ ಅಧ್ಯಕ್ಷರು ಉಪಾಧ್ಯಕ್ಷರು ಸರ್ವ ಸದಸ್ಯರು ಹಾಗೂ ಅಪಾರ ಭಕ್ತರು ಸೇರಿದರು.
ಪ್ರಕಾಶ ಕುಂಬಾರ ಬಾಗಲಕೋಟೆ