ಬೆಳಗಾವಿ:- ಜಿಲ್ಲೆಯ ಗೋಕಾಕ್ ಪಟ್ಟಣದಲ್ಲಿ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಯುವಕನೊಬ್ಬನನ್ನು ಬರ್ಬರವಾಗಿ ಕೊಲೆ ಘಟನೆ ಜರುಗಿದೆ.
ಕಾಲೋನಿಯ ಯುವಕರಿಂದ ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ಆರೋಪಿ ಮನೆಗಳ ಮೇಲೆ ಮೃತನ ಕುಟುಂಬಸ್ಥರು ಕಲ್ಲು ತೂರಿ ಆಕ್ರೋಶ ಹೊರಹಾಕಿದ್ದಾರೆ. 25 ವರ್ಷದ ಶಾನೂರ್ ಅಲಿಯಾಸ್ ಸಂತೋಷ ಪೂಜಾರಿ ಹತ್ಯೆಯಾದ ಯುವಕ. ಐದಾರು ಮಂದಿ ದುಷ್ಕರ್ಮಿಗಳು ಶಾನೂರ್ ಮೇಲೆ ದಾಳಿ ನಡೆಸಿ ಹತ್ಯೆಗೈದಿದ್ದಾರೆ. ಇದರಿಂದ ಕೆರಳಿದ ಶಾನೂರ್ ಕುಟುಂಬಸ್ಥರು, ಆರೋಪಿಗಳ ಮನೆ ಮೇಲೆ ಕಲ್ಲು ತೂರಿದ್ದು, ಸ್ಥಳದಲ್ಲಿ ಬಿಗುವಿಣ ವಾತಾವರಣ ನಿರ್ಮಾಣವಾಗಿದೆ.
ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗೋಕಾಕ್ ಶಹರ ಠಾಣಾ ಪೊಲೀಸರು ಪರಿಶೀಲನೆ ನಡೆಸಿದ್ದು, ಸ್ಥಳದಲ್ಲಿ ಮೂರು ಡಿಆರ್ ತುಕಡಿ, ನಾಲ್ಕು ಮಂದಿ ಸಿಪಿಐ ನೇತೃತ್ವದಲ್ಲಿ ಬಂದೋಬಸ್ತ್ ಕೈಗೊಳ್ಳಲಾಗಿದೆ.