ರಾಮನಗರ :ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆ ಗ್ರಾಮದಲ್ಲಿ ವೃದ್ಧೆ ಕೊಂದಿದ್ದ ಆರೋಪಿ ಬಂಧನ ಮಾಡಿದ ಘಟನೆ ನಡೆದಿದೆ. ಅಕ್ಕೂರು ಠಾಣೆ ಪೊಲೀಸರಿಂದ ನೆರೆಮನೆ ನಿವಾಸಿ ರವಿ ಅರೆಸ್ಟ್ ಮಾಡಲಾಗಿದೆ. ಆರೋಪಿ ಮಾರಕಾಸ್ತ್ರಗಳಿಂದ ಕೊಚ್ಚಿ ಜಯಮ್ಮ (65) ಎಂಬವರನ್ನು ಕೊಲೆಗೈದಿದ್ದ.
ಹಳೆ ದ್ವೇಷ, ಚರಂಡಿ ನೀರಿನ ವಿಚಾರಕ್ಕೆ ಕೊಲೆ ನಡೆಸಿದ್ದ. ಹತ್ಯೆಯಾದ ಜಯಮ್ಮ ಪುತ್ರ ಸಿದ್ದರಾಜು ಮೇಲೆ ಹಲ್ಲೆಗೈದಿದ್ದ ರವಿ, ಆನಂತರ ಸಿದ್ದರಾಜು ಬೈಕ್ನಲ್ಲಿ ಪರಾರಿಯಾಗಿದ್ದ. ಚನ್ನಪಟ್ಟಣ ಬಸ್ ನಿಲ್ದಾಣದಲ್ಲಿ ಬೈಕ್ ನಿಲ್ಲಿಸಿದ್ದ ಪರಾರಿಯಾಗಿದ್ದ. ಇದೀಗ ಆರೋಪಿ ರವಿಯನ್ನು ಅಕ್ಕೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
