ಬೆಂಗಳೂರು: ಸಚಿವ ಭೈರತಿ ಬಸವರಾಜ್ ಆಪ್ತನಾಗಿದ್ದ ವ್ಯಕ್ತಿ ಓರ್ವನಿಗೆ ಮಾಜಿ ಕಾರ್ಪೊರೇಟರ್ ಹಲ್ಲೆ ಮಾಡಿರುವ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ವಿಜ್ಞಾನಪುರ ವಾರ್ಡ್ ಮಾಜಿ ಕಾರ್ಪೊರೇಟರ್ ಎಸ್ ರಾಜು ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಇವರ ಗ್ಯಾಂಗ್ ಪುಷ್ಪರಾಜ್ ಎಂಬುವವರಿಗೆ ಹಲ್ಲೆ ನಡೆಸಿದ್ದಾರೆ. ಕಳೆದ ಒಂದು ವಾರದ ಹಿಂದೆ ಈ ಘಟನೆ ನಡೆದಿದ್ದು, ಸಚಿವರ ಜೊತೆ ಓಡಾಡಿಕೊಂಡು ಸಣ್ಣಪುಟ್ಟ ಕೆಲಸ ಮಾಡಿಕೊಂಡು ಇರುತ್ತಿದ್ದ ಪುಷ್ಪರಾಜ್,
ಈ ವೇಳೆ ಮಾಜಿ ಕಾರ್ಪೊರೇಟರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ. ಈ ವಿಚಾರ ಎಸ್ ರಾಜುಗೆ ಗೊತ್ತಾಗಿ ಹಲ್ಲೆ ಮಾಡಿಸಿರುವ ಅನು ಮಾನ ವ್ಯಕ್ತವಾಗಿದೆ. ನಾಲ್ವರು ಆರೋಪಿಗಳು ಹೆಲ್ಮೆಟ್ ಹಾಕಿಕೊಂಡು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾರೆ. ಈ ಸಂಬಂಧ ಹಲ್ಲೆಗೊಳಗಾದ ಪುಷ್ಪರಾಜ್ ಪತ್ನಿ ಮಾಲತಿ ಅವರಿಂದ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಅನ್ವಯ ವಿಚಾರಣೆ ಕೈಗೊಂಡ ಪೊಲೀಸರು ಆರೋ ಪಿಗಳ ಹುಡುಕಾಟಕ್ಕೆ ಬಲೆ ಬೀಸಿದ್ದಾರೆ. ಈ ಸಂಬಂಧ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
