ಕೊಪ್ಪಳ:- ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಬಾಣಂತಿಯೊಬ್ಬರು ಕಣ್ಣು ಮುಚ್ಚಿದ್ದಾರೆ.
ರೇಣುಕಾ ಪ್ರಕಾಶ್ ಹಿರೇಮನಿ ಹೆರಿಗೆಗಾಗಿ ರಾತ್ರಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದರು. ನಿನ್ನೆ ಕುಷ್ಟಗಿ ಆಸ್ಪತ್ರೆಯಿಂದ ಜಿಲ್ಲಾ ಆಸ್ಪತ್ರೆಗೆ ಬಂದಿದ್ದ ರೇಣುಕಾಗೆ ಮುಂಜಾನೆ 2:30ರ ಸುಮಾರಿಗೆ ಹೆರಿಗೆ ಆಗಿತ್ತು. ಆದರೆ ಡೆಲಿವರಿಗೂ ಮೊದಲೇ ಮಗು ಮೃತಪಟ್ಟಿದ್ದು, ಸಿಜೇರಿಯನ್ ಮಾಡಿ ವೈದ್ಯರು ಮಗುವನ್ನು ಹೊರ ತೆಗೆದಿದ್ದಾರೆ. ಈ ಸಮಯದಲ್ಲಿ ಹೈಬಿಪಿ ಮತ್ತು ಹೃದಯಾಘಾತದಿಂದ ರೇಣುಕಾ ಸಾವನ್ನಪ್ಪಿದ್ದಾರೆ.
ಕರ್ನಾಟಕದಾದ್ಯಂತ ಬಾಣಂತಿಯರ ಮರಣ ಮೃದಂಗ ಮುಂದುವರೆದಿದೆ. ಸಕಾಲಕ್ಕೆ ಚಿಕಿತ್ಸೆ ಸಿಗದೇ ಮಗು ಗರ್ಭದಲ್ಲೇ ಮೃತಪಟ್ಟರೆ, ಚಿಕಿತ್ಸೆ ಫಲಿಸದೆ ಬೆಳಗಾವಿ ಮೂಲದ 8 ತಿಂಗಳ ಗರ್ಭಿಣಿ ಇಂದು ಸಾವನ್ನಪ್ಪಿದ್ದಾರೆ.