ಆನೇಕಲ್: ವೈದ್ಯರ ನಿರ್ಲಕ್ಷ್ಯಕ್ಕೆ ಮಗುವಿಗೆ ಜನ್ಮ ನೀಡಿ ತಾಯಿ ಸಾವನ್ನಪ್ಪಿರುವ ಘಟನೆ ಆನೇಕಲ್ ತಾಲೂಕಿನ ಅಮ್ಮ ಆಸ್ಪತ್ರೆಯಲ್ಲಿ ನಡೆದಿದೆ. ಆನೇಕಲ್ ಪಟ್ಟಣದ ನಿವಾಸಿ ಕವಿತಾ ಸಾವಿಗೀಡಾದ ಮಹಿಳೆ, ಪಟ್ಟಣದ ಅಮ್ಮ ಎಂಬ ಖಾಸಗಿ ಆಸ್ಪತ್ರೆಗೆ ಹೆರಿಗೆಗೆಂದು ಏ.13ರಂದು ಆಗಮಿಸಿದ್ದ ಕವಿತಾಗೆ ವೈದ್ಯೆ ಮಮತಾ ಏ.14ರಂದು ಆಪರೇಷನ್ ಮಾಡವುದಾಗಿ ತಿಳಿಸಿದ್ದರು.
ನಿಮ್ಮ ಮನೆಯಲ್ಲಿ ಇರುವೆಗಳ ಕಾಟವೇ.? ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಹೆರಿಗೆ ಬಳಿಕ ತೀವ್ರ ರಕ್ತಸ್ರಾವವಾದ ಕಾರಣ ಕವಿತಾರನ್ನು ನಾರಾಯಣ ಹೃದಯಾಲಯಕ್ಕೆ ಶಿಫ್ಟ್ ಮಾಡಲಾಗಿತ್ತು. ಆದರೇ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.ಕವಿತಾ ಸಾವಿಗೆ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿರುವ ಕುಟುಂಬಸ್ಥರು ಆಸ್ಪತ್ರೆಯ ವಿರುದ್ದ ಆನೇಕಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.