ಬೆಂಗಳೂರು: ಕೊರೊನಾ ಎರಡನೇ ಲಸಿಕೆ ನೀಡುವಲ್ಲಿ ಬೆಂಗಳೂರು ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದ್ದಾರೆ. 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವಲ್ಲಿ ಬಿಬಿಎಂಪಿ ಹೊರತುಪಡಿಸಿ 10,34,184 ಜನರಿಗೆ ಲಸಿಕೆ ನೀಡಲಾಗಿದೆ,
ಲಸಿಕೆ ನೀಡುವಲ್ಲಿ ನೂರಕ್ಕೆ ನೂರರಷ್ಟು ಗುರಿ ಮುಟ್ಟಿರುವ ನಗರ ಬೆಂಗಳೂರು ಎಂದು ಜಿಲ್ಲಾಧಿಕಾರಿ ಜೆ. ಮಂಜುನಾಥ್ ಹೇಳಿದ್ದಾರೆ. ಮೊದಲ ಸುತ್ತಿನಲ್ಲಿ 13,26,255 ಜನರಿಗೆ ಲಸಿಕೆ ಹಾಕಲಾಗಿದ್ದು, ಶೇ.129 ಸಾಧನೆಯಾಗಿದೆ. ಇಡೀ ರಾಜ್ಯದಲ್ಲಿ ಗುರಿ ಮೀರಿ ಸಾಧನೆಗೈದ ಏಕೈಕ ನಗರ ರಾಜಧಾನಿ ಬೆಂಗಳೂರು ಎಂದು ಮಾಹಿತಿ ನೀಡಿದರು.
