ಬೆಂಗಳೂರು: ಟ್ರಿಪ್ ಟಿಕೆಟ್ ಯೋಜನೆ ಜಾರಿಗೆ ತರಲು ಬೆಂಗಳೂರು ಮೆಟ್ರೋ ಮುಂದಾಗಿದೆ. ವಿಭಿನ್ನ ಟಿಕೆಟಿಂಗ್ ವ್ಯವಸ್ಥೆ ಹಾಗೂ ಸಾರ್ವಜನಿಕ ಟಿಕೆಟ್ ಕೌಂಟರ್ ಗಳಲ್ಲಿ ಜನದಟ್ಟಣೆಯನ್ನು ತಗ್ಗಿಸುವ ನಿಟ್ಟಿನಲ್ಲಿ ಈ ಹೊಸ ಯೋಜನೆಯನ್ನು ಪರಿಚಯಿಸುವುದು ನಮ್ಮ ಮೆಟ್ರೋ ಉದ್ದೇಶವಾಗಿದೆ. ಮಾ. 2022 ರಿಂದ ಟ್ರಿಪ್ ಟಿಕೆಟ್ ಗಳು ಜಾರಿಗೆ ಬರಲಿದ್ದು, ಮೆಟ್ರೋ ಕಾರ್ಡ್ ಗಳ ಮಾದರಿಯಲ್ಲೇ ಟ್ರಿಪ್ ಟಿಕೆಟ್ ಗಳು ಇರಲಿವೆ.
ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ಬಿಎಂಆರ್ ಸಿಎಲ್ ನ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ “ಟ್ರಿಪ್ ಟಿಕೆಟ್ ಗಳು ಬೆಂಗಳೂರಿಗೆ ಕಿರು ಪ್ರವಾಸ ಕೈಗೊಳ್ಳುವವರಿಗೆ ಅಥವಾ ಪೂರ್ವನಿಗದಿಯಾಗ ಮಾರ್ಗಕ್ಕೆ ನಿಯಮಿತವಾಗಿ ಸಂಚರಿಸುವವರಿಗೆ ಸಹಕಾರಿಯಾಗಿರಲಿದೆ. ಇಂತಹ ವ್ಯಕ್ತಿಗಳು ಹೊಸ ಕಾರ್ಡ್ ನ್ನು ಪಡೆಯುವುದಾಗಲೀ ಅಥವಾ ಆ ಕಾರ್ಡ್ ನಲ್ಲಿ ಕನಿಷ್ಠ ಬ್ಯಾಲೆನ್ಸ್ ನಿರ್ವಹಣೆಯ ಅಗತ್ಯವಿರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.
