ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಧಿಕಾರಿ ಹುದ್ದೆಗೆ ಗ್ರಹಚಾರವೇ ಸರಿಯಿಲ್ಲ ಎನ್ನುವ ಚರ್ಚೆಯೊಂದು ಐಎಎಸ್ ವಲಯದಲ್ಲಿ ಕೇಳಿಬರುತ್ತಿದೆ. ಈ ಹಿಂದೆ ರಾಜಧಾನಿಯ ಪ್ರತಿಷ್ಠಿತ ಜಿಲ್ಲಾಧಿಕಾರಿ ಹುದ್ದೆಯಲ್ಲಿದ್ದವರ ವಿಚಿತ್ರ ಘಟನೆಗಳಿಂದ ಈ ಅನುಮಾನಕ್ಕೆ ಕಾರಣವಾಗಿದೆ. ನಗರದ ಜಿಲ್ಲಾಧಿಕಾರಿ ಕಚೇರಿಗೆ ನಿಜಕ್ಕೂ ವಾಸ್ತುದೋಷ ಇದೆಯೇ, ವಾಸ್ತುದೋಷದ ಕಾರಣದಿಂದಲೇ ಐಎಎಸ್ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಅದಕ್ಕೆ ಇಂಬು ಕೊಡುವಂತೆ ಕೆಲವು ಘಟನೆ ಉದಾಹರಣೆ ಕೊಡುತ್ತಾರೆ. ಜಿಲ್ಲಾಧಿಕಾರಿ ಹುದ್ದೆಗೆ ಕುಳಿತವರೆಲ್ಲ ಒಂದಲ್ಲ ಒಂದು ಹಗರಣದಲ್ಲಿ ಸಿಲುಕಿ ಅಮಾನತ್ತು ಆಗುತ್ತಿರುವುದೇ ಚರ್ಚೆಗೆ ಕಾರಣವಾಗಿದೆ. ಬ್ಯಾಕ್ ಟು ಬ್ಯಾಕ್ ಅಕ್ರಮದಲ್ಲಿ ತಗ್ಲಾಕೊಂಡು ಸೆಸ್ಪೆಂಡ್, ಜೈಲು ಪಾಲಾಗ್ತಿದ್ದಾರೆ. ಇದಕ್ಕೆಲ್ಲ ವಾಸ್ತುದೋಷವೇ ಕಾರಣ ಎಂದು ಅನುಮಾನ ವ್ಯಕ್ತಪಡಿಸುತ್ತಿರುವ ಸಾಮಾಜಿಕ ಕಾರ್ಯಕರ್ತ ಸಾಯಿ ದತ್ತ. ಸಾಮಾಜಿಕ ಕಾರ್ಯಕರ್ತರ ಸಾಯಿ ದತ್ತ ಅವರು,

‘ಡಿಸಿ ಕಚೇರಿ ವಾಸ್ತುದೋಷ ನಿವಾರಣೆಗೆ ಕಚೇರಿಯಲ್ಲಿ ಸಂಬಂಧಪಟ್ಟ ಪೂಜೆ ನೆರವಿಸಬೇಕೆಂದು’ ಕಂದಾಯ ಸಚಿವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ. ನಗರದ ಡಿಸಿಯಾದವರು ಆತ್ಮಹತ್ಯೆ, ಅಮಾನತು, ಜೈಲು ಪಾಲಾಗೋದಕ್ಕೆ ವಾಸ್ತುದೋಷವೆ ಕಾರಣ ಆಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಾಯಿ ದತ್ತ, 2013ರಲ್ಲಿ ಎಂ.ಕೆ. ಅಯ್ಯಪ್ಪ ಬೆಂಗಳೂರು ನಗರ ಜಿಲ್ಲಾಧಿಕಾರಿಯಾಗಿದ್ದಾಗಿನಿಂದ ಶುರುವಾದ ಈ ಕಳಂಕ ಪರ್ವ ಈಗಲೂ ಮುಂದುವರಿದಿದ್ದು ನಗರ ಜಿಲ್ಲಾಧಿಕಾರಿ ಹುದ್ದೆಗೆ ಬರುವವರಿಗೆ ಈ ಆತಂಕ ಮುಂದುವರಿದಿದೆ.
