ಚಳಿಗಾಲ ಅಥವಾ ಮಳೆಗಾಲದಲ್ಲಿ ಒಂದು ಕೈಯಲ್ಲಿ ಟೀ ಅಥವಾ ಕಾಫಿ ಕಪ್, ಮತ್ತೊಂದು ಕೈಯಲ್ಲಿ ನಿಮಗೆ ಇಷ್ಟವಾದ ಈರುಳ್ಳಿ ಬೊಂಡ, ಮೆಣಸಿನಕಾಯಿ ಬಜ್ಜಿ, ಕಡ್ಲೆ ಬೇಳೆ ವಡೆಯೋ ಇಟ್ಟುಕೊಂಡು ತಿನ್ನುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನಿಸಿಬಿಡುತ್ತದೆ.
ಇಂತಹ ಪದಾರ್ಥಗಳನ್ನು ಕ್ಷಣಾರ್ಧದಲ್ಲಿ ತಯಾರಿಸಿಬಿಟ್ಟರೆ ಇನ್ನು ಉತ್ತಮವಾಗಿರುತ್ತದೆ.
ಆರಾಮದಾಯಕವಾದ ಬೆಚ್ಚಗಿನ ಅನುಭವ ನೀಡುವ ತ್ವರಿತ ರುಚಿಕರವಾದ ತಿಂಡಿಯನ್ನು ಯಾರು ಇಷ್ಟಪಡುವುದಿಲ್ಲ ಹೇಳಿ. ಹಾಗಾದ್ರೆ ಕ್ಷಣಾರ್ಧದಲ್ಲಿ ಮಾಡುವ ಮನೆಯವರೆಲ್ಲರಿಗೂ ಇಷ್ಟವಾಗುವ ಕಡಲೆ ಬೇಳೆ ನಡೆ ಮಾಡುವುದು ಹೇಗೆ ಎಂಬುದನ್ನು ನೋಡೋಣ.
ಬೇಕಾಗುವ ಪದಾರ್ಥಗಳು
ಮಾಡುವ ವಿಧಾನ
ಕಡಲೆಬೇಳೆಯನ್ನು ನೀರಿನಲ್ಲಿ 2-4 ಗಂಟೆಗಳ ಕಾಲ ನೆನೆಹಾಕಬೇಕು. ನಂತರ ನೆಂದ ಕಡಲೆಬೇಳೆಯನ್ನು ನೀರು ಹಾಕದೆ ತರಿತರಿಯಾಗಿ ರುಬ್ಬಿಕೊಳ್ಳಬೇಕು.
ಈ ರುಬ್ಬಿದ ಕಡಲೆಬೇಳೆಗೆ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ, ಹಸಿಮೆಣಸಿನಕಾಯಿ, ಶುಂಠಿ-ಬೆಳ್ಳುಳ್ಳು ಪೇಸ್ಟ್, ಚಕ್ಕೆ ಪುಡಿ, ಕೊತ್ತಂಬರಿ ಸೊಪ್ಪು, ಪುದೀನ, ಸಬ್ಬಕ್ಕಿ ಸೊಪ್ಪು, ಉಪ್ಪು, ತೆಂಗಿನ ತುರಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು.
ಒಲೆಯ ಮೇಲೆ ಬಾಣಲೆಯಿಟ್ಟು ಎಣ್ಣೆ ಹಾಕಿ ಚೆನ್ನಾಗಿ ಕಾಯಲು ಬಿಡಬೇಕು.
ಎಣ್ಣೆ ಕಾದ ನಂತರ ಮಿಶ್ರಣವನ್ನು ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಿ ಚಪ್ಪಟೆಯಾಕಾರಕ್ಕೆ ತಟ್ಟೆ ಎಣ್ಣೆಗೆ ಹಾಕಿ ಕೆಂಪಗಾಗುವವರೆಗೆ ಕರಿದರೆ ಕಡಲೆಬೇಳೆ ವಡೆ ತಿನ್ನಲು ಸಿದ್ಧವಾಗುತ್ತದೆ.