ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಟಿಯನ್ನು ತಳ್ಳಿದ ಬಾಲಯ್ಯ: ಧನ್ಯವಾದ ಹೇಳಿದ ಅಂಜಲಿ

‘ಗ್ಯಾಂಗ್ಸ್ ಆಫ್ ಗೋದಾವರಿ’ ಸಿನಿಮಾದ ಪ್ರೀರಿಲೀಸ್ ಈವೆಂಟ್​ನಲ್ಲಿ ತೆಲುಗು ನಟಿ ಅಂಜಲಿ ಅವರನ್ನು ಎಲ್ಲರ ಎದುರೇ ತಳ್ಳುವ ಮೂಲಕ ನಟ ಬಾಲಯ್ಯ ಸಾಕಷ್ಟು ಸುದ್ದಿಯಾಗಿದ್ದರು. ಬಾಲಯ್ಯ ಕುಡಿದು ನಟಿಯೊಂದಿಗೆ ಈ ರೀತಿ ವರ್ತಿಸಿದ್ದಾರೆ ಎಂದು ಸಾಕಷ್ಟು ಮಂದಿ ಅಸಮಾಧಾನ ಹೊರ ಹಾಕಿದ್ದರು. ಅಲ್ಲದೆ ಈ ಬಗ್ಗೆ ನಿರ್ಮಾಪಕರು ಕೂಡ ಸ್ಪಷ್ಟನೆ ನೀಡಿದ್ದರು. ಇದೀಗ ಸ್ವತಃ ನಟಿ ಅಂಜಲಿ ಘಟನೆಯ ಬಗ್ಗೆ ಪರೋಕ್ಷವಾಗಿ ಮಾತನಾಡಿದ್ದಲ್ಲದೆ, ಬಾಲಯ್ಯಗೆ ಧನ್ಯವಾದ ಹೇಳಿದ್ದಾರೆ. ಅನೇಕರು ಇದನ್ನು ತೇಪೆ ಹಚ್ಚುವ ಕೆಲಸ ಎಂದಿದ್ದಾರೆ. ಇತ್ತೀಚೆಗೆ … Continue reading ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ನಟಿಯನ್ನು ತಳ್ಳಿದ ಬಾಲಯ್ಯ: ಧನ್ಯವಾದ ಹೇಳಿದ ಅಂಜಲಿ