ಬೆಂಗಳೂರು : ಫೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ ಮುರುಘಾ ಮಠದ ಡಾ. ಶಿವಮೂರ್ತಿ ಶರಣರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಮಂಜೂರಾದ್ರೂ ಸದ್ಯಕ್ಕೆ ಅವರಿಗೆ ಬಿಡುಗಡೆ ಭಾಗ್ಯವಿಲ್ಲ. ಮೊತ್ತೊಂದು ಪೋಕ್ಸೋ ಕೇಸ್ನಲ್ಲಿ ಜಾಮೀನು ಪಡೆಯಬೇಕಿದೆ. 2022ರ ಸೆಪ್ಟಂಬರ್ 1ರಂದು ಅಪ್ರಾಪ್ತ ಬಾಲಕಿ ಮೇಲೆ ದಾಖಲಾಗಿದ್ದ ಒಂದು ಪೋಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀಗಳನ್ನು ಅರೆಸ್ಟ್ ಮಾಡಲಾಗಿತ್ತು. 7 ಷರತ್ತು ವಿಧಿಸಿ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.
7 ಷರತ್ತುಗಳನ್ನ ವಿಧಿಸಿ ಜಾಮೀನು ಮಂಜೂರು
- ಚಿತ್ರದುರ್ಗ ಪ್ರವೇಶ ನಿರ್ಬಂಧ, ಮಠಕ್ಕೆ ತೆರಳುವಂತಿಲ್ಲ
- ಇಬ್ಬರ ಶ್ಯೂರಿಟಿ, 2 ಬಾಂಡ್ ನೀಡಲು ಕೋರ್ಟ್ ಸೂಚನೆ
- ತಪ್ಪದೇ ವಿಡಿಯೋ ಕಾನ್ಫರೆನ್ಸ್ನಲ್ಲಿ ವಿಚಾರಣೆಗೆ ಹಾಜರಾಗಬೇಕು
- ಪಾಸ್ ಪೋರ್ಟ್ ಅನ್ನು ಕೋರ್ಟ್ ವಶಕ್ಕೆ ನೀಡತಕ್ಕದ್ದು,
- ಜಾಮೀನು ಸಿಕ್ಕರೂ ಸದ್ಯಕ್ಕೆ ಮುರುಘಾಶ್ರೀ ಬಿಡುಗಡೆ ಇಲ್ಲ
- ಸಾಕ್ಷ್ಯ ನಾಶ ಮಾಡುವಂತಿಲ್ಲ
- ಮೊತ್ತೊಂದು ಪೋಕ್ಸೋ ಕೇಸ್ನಲ್ಲಿ ಪಡೆಯಬೇಕಿದೆ ಜಾಮೀನು