2011 ರಲ್ಲಿ ಉದಯ ಟಿ.ವಿಯಲ್ಲಿ ಮೂಡಿಬಂದ “ಕನ್ನಡವೇ ಸತ್ಯ- ಕನ್ನಡವೇ ನಿತ್ಯ” ಕಾರ್ಯಕ್ರಮದಲ್ಲಿ ಭಾಗವಹಿಸಿ ‘ಅಭಿಜಾತ ಕನ್ನಡಿಗ’, ‘ಕನ್ನಡದ ಕುವರ’ ಎಂದು ಡಾ. ದೊಡ್ಡರಂಗೇಗೌಡ, ಬಿ ಆರ್ ಲಕ್ಷ್ಮಣರಾವ್, ಸುಧಾ ಬರಗೂರುರವರಿಂದ ಹೊಗಳಿಸಿಕೊಂಡ.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಪ್ರತಿಭೆ ಶ್ರೀ ರಾಜು ಕೊಕ್ಕನವರ ಇವರು ಸರಕಾರಿ ಉರ್ದು ಪ್ರೌಢಶಾಲೆ (ಆರ್.ಎಂ.ಎಸ್.ಎ) ಬನಹಟ್ಟಿಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸದಾ ಅಧ್ಯಯನಶೀಲ ಪ್ರವೃತ್ತಿ ಯವರಾದ ಇವರು ಡಾ.ಕೆ.ಆರ್ ದುರ್ಗಾದಾಸ್ (ನಿವೃತ್ತ ಪ್ರಾಧ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ) ಇವರ ಮಾರ್ಗದರ್ಶನದಲ್ಲಿ “ನವೋದಯ ಕಥಾಸಾಹಿತ್ಯ ಮತ್ತು ವಸಾಹತೀಕರಣದ ಸಂದರ್ಭ” ಎಂಬ ಮಹಾಪ್ರಬಂಧ ಮಂಡಿಸಿದ್ದಕ್ಕಾಗಿ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್.ಡಿ ಪದವಿಯನ್ನು ಪ್ರದಾನ ಮಾಡಿದೆ.
ಪ್ರಕಾಶ ಕುಂಬಾರ
Ain ನ್ಯೂಸ್ 24 ಕನ್ನಡ ಬಾಗಲಕೋಟೆ

