ಮೌನವಾಗಿದ್ದುಕೊಂಡು ದೇಶದ ಶಾಂತಿಗಾಗಿ ಸಾಧು ಸಂತರು ಆಧ್ಯಾತ್ಮಿಕ ಸಾಧನೆ ಮಾಡಲು ಬಹು ದೊಡ್ಡ ತ್ಯಾಗವನ್ನೆ ಮಾಡಿರುತ್ತಾರೆ ಎಂದು ಗುರುದೇವ ಬ್ರಹ್ಮಾನಂದ ಆಶ್ರಮದ ಗುರುಸಿದ್ಧೇಶ್ವರ ಶ್ರೀಗಳು ಹೇಳಿದರು.
ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ರಬಕವಿಯ ಬ್ರಹ್ಮಾನಂದ ಆಶ್ರಮದ ಮೈದಾನದಲ್ಲಿ ಹಮ್ಮಿಕೊಂಡ ಬ್ರಹ್ಮಾನಂದ ಶಿವಯೋಗಿಗಳ 154 ನೇ ಜಯಂತಿ ಮಹೋತ್ಸವ ಹಾಗೂ ನೂತನ ಗುರುಭವನ ಕಟ್ಟಡದ ಭೂಮಿ ಪೂಜಾ ಸಮಾರಂಭದಲ್ಲಿ ಮಾತನಾಡಿದ ಅವರು, ಸಂತರಾದವರು ಸರ್ವ ಧರ್ಮದವರಿಗೂ ಒಳಿತು ಬಯಸುವರಾಗಬೇಕು ಎನ್ನುವ ಸದುದ್ದೇಶದಿಂದ ಬ್ರಹ್ಮಾನಂದರು ಸಮಗ್ರ ಮಾನವ ಕುಲ ಉದ್ದಾರವಾಗಬೇಕೆಂದು 11 ವರ್ಷಗಳ ಕಾಲ ಹಿಮಾಲಯದಲ್ಲಿ ತಪ್ಪಸ್ಸುಗೈದು ನಂತರ ದೇಶ ಸಂಚಾರ ಮಾಡುತ್ತಾ ಮಾನವ ಕುಲದ ಉದ್ದಾರಕ್ಕಾಗಿ ಶ್ರಮಿಸಿದವರು.

ರಬಕವಿಯಲ್ಲಿಯೂ ಕೂಡಾ ಅನೇಕ ವರ್ಷಗಳ ಕಾಲ ಬ್ರಹ್ಮಾನಂದರು ಇದ್ದು ಭಕ್ತರ ಉದ್ದಾರ ಮಾಡಿದ್ದಾರೆಂದು ಅವರ ಒಡನಾಡಿಗರು ಹೇಳುತ್ತಾರೆ.
ನಿರಂತರ ಶ್ರೀ ಮಠದಲ್ಲಿ ಆಧ್ಯಾತ್ಮಿಕ ಚಟುವಟಿಕೆಗಳು, ಚಿಂತನೆಗಳು ನಡೆಯಲು ಬೃಹತ್ ಗುರುಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಸರ್ವ ಧರ್ಮಿಯರು ಸಹ ಸಹಕಾರ ನೀಡಿ ಶ್ರೀಗಳ ಭಕ್ತಿಗೆ ಪಾತ್ರರಾಗಿರಿ ಎಂದರು.
ಸಮಾರಂಭದಲ್ಲಿ ಬನಹಟ್ಟಿ ಹಿರೇಮಠದ ಶ್ರೀ ಶರಣಬಸವ ಶಿವಾಚಾರ್ಯ ಶ್ರೀಗಳು, ಹಳಿಂಗಳಿ ಕಮರಿಮಠದ ಶಿವಾನಂದ ಶ್ರೀಗಳು, ಚಿಮ್ಮಡದ ಜನಾರ್ಧನ ಪೂಜಾರಿ ಶ್ರೀಗಳು, ಬ್ರಹ್ಮಾನಂದ ಶ್ರೀಗಳು ಬದುಕಿನ ದಿನಗಳಲ್ಲಿ ಭಕ್ತರ ಉದ್ದಾರಕ್ಕಾಗಿ ಶ್ರಮಿಸಿದ ಅನೇಕ ಕ್ಷಣಗಳನ್ನು ಸ್ಮರಿಸಿದರು, ಹೊಸೂರಿನ ಪರಮಾನಂದ ಶ್ರೀಗಳು, ನಗರಸಭಾಧ್ಯಕ್ಷ ಶ್ರೀಶೈಲ ಬೀಳಗಿ, ಉಪಾಧ್ಯಕ್ಷೆ ಬಾಳವ್ವ ಕಾಖಂಡಕಿ, ಗಿರೀಶ ಮುತ್ತೂರ, ಮಹಾದೇವ ಕವಿಶೆಟ್ಟಿ ವೇದಿಕೆ ಮೇಲಿದ್ದರು.
ಮಹಾದೇವ ಕೋಟ್ಯಾಳ, ವೆಂಕಟೇಶ ನಿಂಗಸಾನಿ, ಎಂ.ಎಸ್. ಬದಾಮಿ, ಅಣ್ಣಪ್ಪ ಚಾಪಿ, ಶಿವಾನಂದ ಕಡಕೋಳ, ಸದಾಶಿವ ಖವಾಸಿ, ಬುದ್ಧಪ್ಪ ಕುಂದಗೋಳ, ಸಂಗಪ್ಪ ಕುಂದಗೋಳ, ರಾಮಣ್ಣ ಹುಲಕುಂದ, ಬಸು ಗುಡ್ಡೋಡಗಿ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ ಕನ್ನಡ
ಬಾಗಲಕೋಟೆ