ತಮ್ಮ ಶಾಲೆಯಲ್ಲಿ ಓದುತ್ತಿರುವ ನೂರಾರು ಮಕ್ಕಳಿಗೆ ಕೃಷಿ ಎಂದರೇನು ಎಂಬುದರ ಸ್ಪಷ್ಟ ಪರಿಕಲ್ಪನೆ, ಪ್ರಾಯೋಗಿಕ ಕೆಲಸ ಮಾಡಿಸುವ ಮೂಲಕ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಿಭಿನ್ನವಾಗಿ ರೈತ ದಿನಾಚರಣೆ ಆಚರಿಸಲಾಯಿತು.
ಮುಖ್ಯ ಗುರುಗಳಾದ ಕೆ.ಎನ್. ತೆಲಗಾಂವ ಅವರ ನೇತೃತ್ವದಲ್ಲಿ ಮಕ್ಕಳಿಗೆ ಪ್ರೋತ್ಸಾಹ ನೀಡಿ ಪ್ರೇರೇಪಿಸಿದರು. ನಾಟಿ ಹೇಗೆ ಮಾಡಬೇಕು? ಸಸಿಗಳನ್ನು ಹೇಗೆ ಸಂರಕ್ಷಿಸಬೇಕು? ಅವುಗಳಿಗೆ ಅಗತ್ಯ ಪೋಷಕಾಂಶಗಳನ್ನು ಹೇಗೆ ನಿರ್ವಹಿಸಬೇಕು? ಎಂಬುದರ ಬಗ್ಗೆ ಮಕ್ಕಳಿಗೆ ರೈತರಿಂದ ಪ್ರಾಯೋಗಿಕ ಮಾಹಿತಿ ಪಡೆದುಕೊಂಡರು.

ಮಕ್ಕಳಿಗೆ ವಿದ್ಯಾಭ್ಯಾಸದೊಂದಿಗೆ ಕೃಷಿಯಲ್ಲಿನ ಪ್ರಮುಖವಾಗಿ ರೇಷ್ಮೆ ಹುಳು ಸಾಕಾಣಿಕೆ ಕೇಂದ್ರಕ್ಕೆ ಭೆಟ್ಟಿ ನೀಡಿ ಅದರ ಬಗ್ಗೆ ಆಸಕ್ತಿ ಮೂಡಿಸುವ ಉದ್ದೇಶಕ್ಕೆ ಬನಹಟ್ಟಿ ಸಮೀಪದ ಚಿದಾನಂದ ಹೊರಟ್ಟಿಯವರ ತೋಟದಲ್ಲಿನ ಕೃಷಿ ಚಟುವಟಿಕೆಗಳ ಮಾಹಿತಿ ನೀಡಲಾಯಿತು.
ಇದೇ ಸಂದರ್ಭದಲ್ಲಿ
ಶಿಕ್ಷಕರಾದ ಆರ್.ಜೆ. ರಾಠೋಡ, ಎಸ್.ಬಿ. ಸಂಗೋದಿ, ಅರುಣ ಕುಲಕರ್ಣಿ, ಬಿ.ಕೆ. ಗೋವಿಂದಗೋಳ, ಎಸ್.ಟಿ. ಬಸಪ್ಪಗೋಳ, ಎಸ್.ಬಿ. ಕವಟಗೊಪ್ಪ ಸೇರಿದಂತೆ ಅನೇಕರಿದ್ದರು.
ಪ್ರಕಾಶ ಕುಂಬಾರ
Ain ನ್ಯೂಸ್ ಕನ್ನಡ
ಬಾಗಲಕೋಟೆ
